

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಸಿನಿಮಾ ಮಾತ್ರವಲ್ಲದೆ ವೈಯಕ್ತಿಕ ಜೀವನ ಕುರಿತಾಗಿಯೂ ಆಗಾಗ್ಗ ಸುದ್ದಿ ಆಗುತ್ತಲಿರುತ್ತಾರೆ. ಇದೀಗ ನಟನಿಗೆ ವಯಸ್ಸಾಯ್ತು ಎಂದು ಹೇಳುತ್ತಾ ನೆಟ್ಟಿಗರು ಒಂದು ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ.
ಸಲ್ಮಾನ್ ಖಾನ್ಗೆ 58 ವರ್ಷ ಮುಗಿದಿದೆ. ನಿತ್ಯ ಜಿಮ್ ಮಾಡುತ್ತಾರೆ. ಸಿನಿಮಾಗಳಲ್ಲಿ ಆ್ಯಕ್ಷನ್ ದೃಶ್ಯಗಳನ್ನು ಮಾಡೋಕೆ ಆದ್ಯತೆ ನೀಡುತ್ತಾರೆ. ಆದರೆ, ಸಲ್ಲುಗೆ ಈಗ ಮೊದಲು ಇದ್ದಷ್ಟು ಎನರ್ಜಿ ಇಲ್ಲ. ಅವರಿಗೆ ವಯಸ್ಸಾಗಿದ್ದು, ಎದ್ದೇಳಲು ಕಷ್ಟಪಟ್ಟಿದ್ದಾರೆ ಸದ್ಯ ವೈರಲ್ ಆಗಿರೋ ವಿಡಿಯೋ ಹೀಗೊಂದು ಅನುಮಾನ ಹುಟ್ಟುಹಾಕಿದೆ
ಸಲ್ಮಾನ್ ಖಾನ್ ಇತ್ತೀಚೆಗೆ ಈವೆಂಟ್ ಒಂದರಲ್ಲಿ ಭಾಗಿ ಆಗಿದ್ದರು. ಈ ಈವೆಂಟ್ನಲ್ಲಿ ಸೋನಾಲಿ ಬೇಂದ್ರೆ ಅವರು ಆಗಮಿಸಿದರು. ಅವರನ್ನು ಭೇಟಿ ಮಾಡಲು ಎದ್ದರು. ಈ ವೇಳೆ ಎದ್ದೇಳಲು ಅವರು ಸಾಕಷ್ಟು ಕಷ್ಟಪಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಲ್ಲು ಆರೋಗ್ಯದ ಬಗ್ಗೆ ಅನೇಕರು ಆತಂಕ ಹೊರಹಾಕಿದ್ದಾರೆ. ಸಲ್ಲುಗೆ ವಯಸ್ಸಾಗಿದೆ. ಸಲ್ಲುಗೆ ಈಗ ಮೊದಲು ಇದ್ದಷ್ಟು ಎನರ್ಜಿ ಇಲ್ಲ ಎಂದು ಕೆಲವರು ಹೇಳಿದ್ದಾರೆ.
ಸಲ್ಮಾನ್ ಖಾನ್ ಅವರು ಸದ್ಯ ‘ಸಿಖಂದರ್’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕಾಗಿ ಅವರು ಮುಂಬೈನಲ್ಲಿ ನಿರಂತರವಾಗಿ 45 ದಿನಗಳ ಶೂಟ್ನಲ್ಲಿ ಭಾಗಿ ಆಗಲಿದ್ದಾರೆ.