ಸಲ್ಮಾನ್​ ತದ್ರೂಪಿಯನ್ನು ಬಂಧಿಸಿದ ಪೊಲೀಸರು: ಕಾರಣ ಇಲ್ಲಿದೆ

Azam Khan
Published on

ಲಖನೌ: ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದ ಸಲ್ಮಾನ್​ ಖಾನ್​ ತದ್ರೂಪಿ ಆಜಮ್​​ ಅನ್ಸಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅರೇ ಏನಿದು ಇವರನ್ನು ಏಕೆ ಬಂಧಿಸಿದ್ದಾರೆ ಎಂದು ಹುಬ್ಬೇರಿಸಿದವರಿಗೆ ಇಲ್ಲಿದೆ ಉತ್ತರ. ರಸ್ತೆಯಲ್ಲಿ ಡ್ಯಾನ್ಸ್​ ಮಾಡಲು ಹೋಗಿ ಟ್ರಾಫಿಕ್​​ ಜಾಮ್​ಗೆ ಕಾರಣರಾಗಿದ್ದ ಆಜಮ್​ ಅನ್ಸಾರಿ ಬಂಧನಕ್ಕೆ ಕಾರಣವಾಗಿದೆ.

ಲಖನೌನಲ್ಲಿ ಭಾನುವಾರ ರಾತ್ರಿ ರಸ್ತೆ ಮಧ್ಯೆದಲ್ಲೇ ಬೈಕ್​ ನಿಲ್ಲಿಸಿ ಡ್ಯಾನ್ಸ್​ ಮಾಡಿದ್ದಾರೆ. ಇದನ್ನು ನೋಡಲು ರಸ್ತೆ ತುಂಬೆಲ್ಲಾ ಜನರು ಸೇರಿದ್ದರು. ಇದರಿಂದಾಗಿ ಕೆಲಕಾಲ ಟ್ರಾಫಿಕ್​ ಜಾಮ್​ ಉಂಟಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಹಾಗಾಗಿ ಶಾಂತಿ ಕದಡಿದ ಆರೋಪದ ಮೇಲೆ ಅಜಮ್​ನನ್ನು ಠಾಕೂರ್​ಗಂಜ್​ ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net