ಬರ್ಬರವಾಗಿ ಹತ್ಯೆಯಾದ ಬಾಬಾ ಸಿದ್ದಿಕ್; ಬಿಗ್​ಬಾಸ್​ ಶೂಟಿಂಗ್​ ಅರ್ಧಕ್ಕೆ ನಿಲ್ಲಿಸಿ ಆಸ್ಪತ್ರೆಗೆ ಬಂದ ಸಲ್ಮಾನ್​​ ಖಾನ್​​...Cancels Bigg Boss Shoot

salman khan
Published on

ಮುಂಬೈ: ಎನ್‌ಸಿಪಿ ನಾಯಕ  ಬಾಬಾ ಸಿದ್ದಿಕ್ ( Baba Siddique ) ಅವರನ್ನು ಶನಿವಾರ ಮುಂಬೈನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅವರ ದುರಂತ ಸಾವಿನ ಈ ಸುದ್ದಿ ತಿಳಿಯುತ್ತಿದ್ದಂತೆ  ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ( Salman Khan ) ಶನಿವಾರ ರಾತ್ರಿ ಬಿಗ್ ಬಾಸ್ 18 ( Bigg Boss 18) ರ ಶೂಟಿಂಗ್ ಅನ್ನು ( Cancels Bigg Boss Shoot ) ರದ್ದುಗೊಳಿಸಿ ಆಸ್ಪತ್ರೆಗೆ ( Hospital) ಬಂದಿದ್ದಾರೆ.  ಸಲ್ಮಾನ್ ಬಾಬಾ ಸಿದ್ದಿಕ್ ಅವರ ಕುಟುಂಬವನ್ನು ಭೇಟಿ ಮಾಡಲು ಲೀಲಾವತಿ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ.

ಮುಂಬೈನಲ್ಲಿರುವ ತನ್ನ ಮಗ ಜೀಶಾನ್ ಕಚೇರಿಗೆ ಸಿದ್ದಿಕ್ ಬಂದಿದ್ದ ವೇಳೆ  ನಾಲ್ವರು ದುಷ್ಕರ್ಮಿಗಳು ಆತನ ಮೇಲೆ ಗುಂಡಿನ ದಾಳಿ ನಡೆಸಿದರು. ಆರು ಗುಂಡುಗಳು ಆತನ ದೇಹವನ್ನು ಪ್ರವೇಶಿಸಿವೆ. ನಾಲ್ಕು ಗುಂಡುಗಳು ಎದೆಗೆ ನುಗ್ಗಿದವು.ತಕ್ಷಣ ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ರಂಜಾನ್ ತಿಂಗಳಲ್ಲಿ ಮುಂಬೈ ನಗರದಲ್ಲಿ ಬಾಬಾ ಸಿದ್ದಿಕ್ ಅವರ ಇಫ್ತಾರ್ ಕೂಟಗಳು ಬಹಳ ಪ್ರಸಿದ್ಧವಾಗಿವೆ. ಏಕೆಂದರೆ ಆ ಇಫ್ತಾರ್ ಪಾರ್ಟಿಗಳಲ್ಲಿ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ (ಬಾಬಾ ಸಿದ್ದಿಕ್) ನಂತಹ ಟಾಪ್ ಬಾಲಿವುಡ್ ತಾರೆಗಳು ಭಾಗವಹಿಸುತ್ತಾರೆ. ಬಾಬಾ ಸಿದ್ದಿಕ್ ಶಾರುಖ್ ಮತ್ತು ಸಲ್ಮಾನ್ ಗೆ ತುಂಬಾ ಹತ್ತಿರವಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಇವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಲ್ಮಾನ್​​ ಖಾನ್​ ಅವರು ಬಿಗ್​ಬಾಸ್​ ಶೂಟಿಂಗ್​ ಅರ್ಧಕ್ಕೆ ನಿಲ್ಲಿಸಿ  ಸಿದ್ದಿಕ್ ಅವರ ಕುಟುಂಬಕ್ಕೆ ಸಾಂತ್ವ ಹೇಳಲು ಆಸ್ಪತ್ರೆಗೆ ಬಂದಿದ್ದಾರೆ.

ಬಾಬಾ ಸಿದ್ದಿಕ್ ಮಹಾರಾಷ್ಟ್ರ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು ಮತ್ತು ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳೊಂದಿಗೆ ನಿಕಟ ಸಂಬಂಧಗಳಿಗೆ ಹೆಸರುವಾಸಿಯಾಗಿದ್ದರು. 15 ದಿನಗಳ ಹಿಂದೆ ಸಿದ್ದಿಕ್ ಗೆ ಕೊಲೆ ಬೆದರಿಕೆ ಬಂದಿತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರಿಗೆ 'ವೈ' ಕೆಟಗರಿ ಭದ್ರತೆ ನೀಡಲಾಗಿತ್ತು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net