ನನ್ನ ಬೆನ್ನಿಗೆ ಚೂರಿ ಇರಿದವನು ಸಲ್ಮಾನ್! ಆ ಪಾತ್ರಕ್ಕೆ ಈ ಕ್ರಿಮಿನಲ್​ ಏಕೆ? ಅಭಿನವ್​ ಕಶ್ಯಪ್ ಕೆಂಡಾಮಂಡಲ | Salman Khan

ವಿಜಯವಾಣಿ (6)
Published on

ಮುಂಬೈ: ಪ್ರಸ್ತುತ ಹಿಂದಿಯ ಬಿಗ್ ಬಾಸ್​ ಸೀಸನ್​ 18ರಲ್ಲಿ ಸಖತ್ ಬಿಜಿಯಾಗಿರುವ ಬಾಲಿವುಡ್​ ನಟ ಸಲ್ಮಾನ್ ಖಾನ್ (Salman Khan), ವಾರಾಂತ್ಯದ ಸಂಚಿಕೆಯಲ್ಲಿ 'ದಬಾಂಗ್' ಚಿತ್ರದ ನಿರ್ದೇಶಕ ಅಭಿನವ್ ಕಶ್ಯಪ್​ಗೆ ಪರೋಕ್ಷ ಟಾಂಗ್ ಕೊಟ್ಟ ಕಾರಣ, ಇದೀಗ ಅಭಿನವ್ ಮತ್ತೊಮ್ಮೆ​ ನಟನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕ್ರಿಮಿನಲ್​ ಏಕೆ ಯೋಧನ ಪಾತ್ರಕ್ಕೆ?

ಸಲ್ಮಾನ್​ ಅಭಿನಯಿಸಲಿರುವ ಮುಂಬರುವ 'ಬ್ಯಾಟಲ್ ಆಫ್ ಗಾಲ್ವಾನ್' ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ಖಾನ್​ ಕಾಣಿಸಿಕೊಳ್ಳಲಿದ್ದಾರೆ. ಈ ವಿಚಾರವನ್ನು ಉಲ್ಲೇಖಿಸಿ ಕಿಡಿಕಾರಿರುವ ಅಭಿನವ್, "ಒಬ್ಬ ಕ್ರಿಮಿನಲ್​ ಹೇಗೆ ಯೋಧನ ಪಾತ್ರದಲ್ಲಿ ನಟಿಸಲು ಸಾಧ್ಯ? ಅಂದು ದಬಾಂಗ್ ಚಿತ್ರವನ್ನು ಹೈಜಾಕ್ ಮಾಡಿ ಕೆಲಸದ ವಾತಾವರಣವನ್ನು ವಿಷಮಯವಾಗಿ ಸೃಷ್ಟಿಸಿದ್ದು ಆತ. ಅದೇ ಇಂದು ನೋಡಿದ್ರೆ ಸಕ್ಸಸ್​ನ ಕ್ರೆಡಿಟ್​ ತೆಗೆದುಕೊಳ್ಳುತ್ತಾರೆ. ದಬಾಂಗ್ ಸೀಕ್ವೆಲ್​ನಿಂದ ನನ್ನನ್ನು ಹೊರಗುಳಿಯುವಂತೆ ಮಾಡಿದ್ದು ಸಲ್ಮಾನ್​" ಎಂದಿದ್ದಾರೆ.

ಅವಕಾಶ ಕೇಳಿಕೊಂಡು ಬಂದಿದ್ದ

"ಸಲ್ಮಾನ್​ ಈಗಾಗಲೇ ತನ್ನ ಜೀವನವನ್ನು ಸಂಪೂರ್ಣವಾಗಿ ಹಾಳು ಮಾಡಿಕೊಂಡಿದ್ದಾನೆ. ಅದು ಏನೇ ಮಾಡಿದ್ರು ಸರಿಯಾಗುವುದಿಲ್ಲ. ನಾನು ನನ್ನ ಹೃದಯದಿಂದ ಸತ್ಯ ಹೇಳಿದ್ದೀನಿ. ಹಾಗಾಗಿ, ಆತ ಇಲ್ಲಿ ಬೇಸರ ಪಟ್ಟುಕೊಳ್ಳುವ ಮಾತಿಲ್ಲ. ದಬಾಂಗ್​ ಮೂಲಕ ಆತನಿಗೆ ಒಂದು ಸೂಪರ್​ಹಿಟ್​ ಕೊಟ್ಟೆ. ಅಂದು ಒಂದು ಚಿತ್ರಕ್ಕಾಗಿ ನನ್ನನ್ನು ಬೇಡಿಕೊಂಡ ಸಲ್ಮಾನ್​. ಅಂತೆಯೇ, ದಬಾಂಗ್​ನಲ್ಲಿ ಆತನಿಗೆ ಅವಕಾಶ ನೀಡಿದೆ. ಆದ್ರೆ, ಅದಾದ ಬಳಿಕ ನನ್ನ ಬೆನ್ನಿಗೆ ಚೂರಿ ಇರಿದ. ನನ್ನ ವಿರುದ್ಧ ಎಷ್ಟು ವಿಷಕಾರಿದ್ದರೋ, ಅದನ್ನೇ ನಾನೀಗ ವಾಪಾಸ್​ ಕೊಡ್ತಿದ್ದೀನಿ" ಎಂದು ಕಿಡಿಕಾರಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net