ಜಿಂಕೆ ಚರ್ಮ,ಕೊಂಬು ಮಾರಾಟ, ಆರೋಪಿ ಸೆರೆ

arrested
Published on

ಬೆಂಗಳೂರು: ಜಿಂಕೆ ಚರ್ಮ, ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಬರದವಳ್ಳಿ ಗ್ರಾಮದ ಚಂದ್ರಶೇಖರಪ್ಪ ಗೌಡ (43) ಬಂಧಿತ. 1 ಜಿಂಕೆ ಚರ್ಮ, 12 ಜಿಂಕೆ ಕೊಂಬುಗಳು ಹಾಗೂ 2 ಕಾಡೆಮ್ಮೆ ಕೊಂಬುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಮಹದೇವಪುರ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿ ಜಿಂಕೆ ಚರ್ಮ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.

ಚಂದ್ರಶೇಖರಪ್ಪ ಗೌಡ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಜಿಂಕೆ ಚರ್ಮ, ಕೊಂಬುಗಳ ಮಾರಾಟಕ್ಕೆ ಮುಂದಾಗಿದ್ದ. ಈತನಿಗೆ ಯಾರು ಇವುಗಳನ್ನು ನೀಡಿದ್ದಾರೆ ? ಎಲ್ಲಿಂದ ಇವುಗಳನ್ನು ತಂದಿದ್ದ ? ಯಾರಿಗೆ ಮಾರಾಟ ಮಾಡಲು ಬಂದಿದ್ದ ಎಂಬುದು ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net