ವೇತನ ವಿಳಂಬ: ನೈರ್ಮಲ್ಯ ಕಾರ್ಮಿಕರಿಗೆ 50 ಸಾವಿರ ಪರಿಹಾರ ನೀಡುವಂತೆ ಬಾಂಬೆ ಹೈಕೋರ್ಟ್ ಆದೇಶ! | High Court

Bombay Highcourt
Published on

High Court: ಬೃಹನ್ಮುಂಬೈ ಮಹಾನಗರ ಪಾಲಿಕೆಯು ನೌಕಕರಿಗೆ ಕಳೆದ ಎರಡು ತಿಂಗಳಿಂದ ಸಂಬಳ ಹಾಗೂ ಬಾಕಿ ಪಾವತಿಸಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಈ ನಿಟ್ಟಿನಲ್ಲಿ ಕಳೆದ ಎರಡು ತಿಂಗಳ ಸಂಬಳದ ಜೊತೆಗೆ ಪ್ರತಿ ಕಾರ್ಮಿಕರಿಗೆ ಹೆಚ್ಚುವರಿಯಾಗಿ 50,000 ರೂ.ಗಳನ್ನು ಪಾವತಿಸಬೇಕು ಎಂದು ಬಾಂಬೆ ಹೈ ಕೋರ್ಟ್​ ಪುರಸಭೆಗೆ ನಿರ್ದೇಶನ ನೀಡಿದೆ.

ಘಟನೆ ಏನು?

ಈ ಹಿಂದೆ ಬೃಹನ್ಮುಂಬೈ ಮಹಾನಗರ ಪಾಲಿಕೆಯು ದೀರ್ಘ ಹೋರಾಟದ ನಂತರ, ಪಾಲಿಕೆಯ 580 ಎರಡು ವರ್ಷಗಳ ಹಿಂದೆ ಕಾರ್ಮಿಕರನ್ನು ಸೇವೆಗೆ ಮರುಸ್ಥಾಪಿಸಿತು. ಈ ವೇಳೆ ಪಾಲಿಕೆಯು 2 ತಿಂಗಳುಗಳಿಂದ ಸರಿಯಾಗಿ ಸಂಬಳ ನೀಡಿದೇ ಇರುವುದರಿಂದ ಕಾರ್ಮಿಕರು ಹೈಕೋರ್ಟ್​ಗೆ ಅರ್ಜಿಯನ್ನು ಸಲ್ಲಿಸಿದ್ದರು. ಇನ್ನು ಈ ವಿಚಾರಣೆಯ ವೇಳೆ ಬಿಎಂಸಿ ಶೀಘ್ರದಲ್ಲೇ ಅವರಿಗೆ ಸಂಬಳ ಮತ್ತು ಬಾಕಿ ನೀಡುವುದಾಗಿ ಭರವಸೆ ನೀಡಿದ ನಂತರ ಕಾರ್ಮಿಕರು ಸಲ್ಲಿಸದ ಅರ್ಜಿಯನ್ನು ಬಾಂಬೆ ಹೈಕೋರ್ಟ್​ ವಜಾಗೊಳಿಸಿತ್ತು.

ವೇತನ ಪಾವತಿ ವಿಳಂಬವಾಗುತ್ತಿರುವ ಬಗ್ಗೆ ನ್ಯಾಯಮೂರ್ತಿ ಮಿಲಿಂದ್ ಜಾಧವ್ ಅವರ ಏಕಸದಸ್ಯ ಪೀಠವು ಗಂಭೀರ ಕಳವಳ ವ್ಯಕ್ತಪಡಿಸಿದೆ. ಇನ್ನು ಕಾರ್ಮಿಕರ ಶಾಶ್ವತ ಉದ್ಯೋಗ ಸ್ಥಿತಿಯನ್ನು ನ್ಯಾಯಾಲಯ ಗಮನಿಸಿದ್ದು, ಪಾಲಿಕೆಯು ಸಂಬಳ ನೀಡಲು ವಿಫಲವಾಗಿದ್ದರಿಂದ ತನ್ನ ತೀರ್ಪಿನಲ್ಲಿ ಭರವಸೆಗಳು ಈಡೇರದಿದ್ದರೆ, ಪುರಸಭೆಯ ವಿರುದ್ಧ ಮುಂದಿನ ದಿನಗಳಲ್ಲಿ ದೂರು ಸಲ್ಲಿಸಲು ಅವಕಾಶ ನೀಡಿದೆ.

1996 ರಲ್ಲಿ, ಸುಪ್ರೀಂ ಕೋರ್ಟ್ ಈ ಕಾರ್ಮಿಕರಿಗೆ ಶಾಶ್ವತ ಉದ್ಯೋಗಗಳು ಮತ್ತು ಆರ್ಥಿಕ ಸೌಲಭ್ಯಗಳನ್ನು ನೀಡುವಂತೆ ಪುರಸಭೆಗೆ ನಿರ್ದೇಶನಗಳನ್ನು ನೀಡಿದೆ. ಆದರೆ, ಈ ಕಾಯ್ದೆಯನ್ನು ಜಾರಿಗೆ ತರದ ಕಾರಣ ಸಂಸ್ಥೆಯು ಹೈಕೋರ್ಟ್‌ಗೆ ಮೊರೆ ಹೋಗಬೇಕಾಯಿತು. ನವೆಂಬರ್ 8, 2023 ರಂದು, 580 ಕಾರ್ಮಿಕರನ್ನು ಖಾಯಂ ಎಂದು ಗುರುತಿಸಿ ಎರಡು ತಿಂಗಳೊಳಗೆ ಸಂಬಳ ಪಾವತಿಸಬೇಕೆಂದು ಹೈಕೋರ್ಟ್​ ತೀರ್ಮಾನ ನೀಡಿತು. ಈ ವೇಳೆ ಪಾಲಿಕೆ ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಿ, ಈ ಅನುಸರಣೆಗೆ 4 ತಿಂಗಳ ಗಡುವನ್ನು ವಿಧಿಸಿತು.

ಇದಾದ ಬಳಿಕ, ಸಂಸ್ಥೆಯು ಹೈಕೋರ್ಟ್‌ಗೆ ಮರಳಿದ್ದು, ಹಿಂದಿನ ಆದೇಶವನ್ನು ಪೂರೈಸುವಲ್ಲಿ ನಿಗಮವು ಯಾವುದೇ ತುರ್ತು ತೋರಿಸಿಲ್ಲ ಎಂದು ವಾದಿಸಿತು. 217 ಕಾರ್ಮಿಕರಿಗೆ ಸೇವಾ ದೃಢೀಕರಣ ಪತ್ರಗಳು ಬಂದಿದ್ದರೂ ಸಹ ಅವರಿಗೆ ಎರಡು ತಿಂಗಳುಗಳಿಂದ ವೇತನ ಪಾವತಿಯಾಗಿಲ್ಲ. ಇನ್ನು 363 ಕಾರ್ಮಿಕರಿಗೆ ದೃಢೀಕರಣ ಪತ್ರಗಳು ಬಂದಿಲ್ಲ. ಹಾಗೇ 77 ಕಾರ್ಮಿಕರು ಯಾವುದೇ ವೇತನ ಪಡೆಯದೆ ಮೃತಪಟ್ಟಿದ್ದಾರೆ ಎಂದು ತಿಳಿದಿದೆ.

ಈ ಎಲ್ಲಾ ಮಾಹಿತಿಗಳನ್ನು ಸ್ವೀಕರಿಸಿದ ಹೈಕೋರ್ಟ್​ ಇದಕ್ಕೆ ಪ್ರತಿಯಾಗಿ ಪುರಸಭೆಯ 570 ಕಾರ್ಮಿಕರಿಗೆ ಬಾಕಿ ಪಾವತಿಯನ್ನು ನೀಡಬೇಕು. ಈಗಾಗಲೇ ಮೃತಪಟ್ಟಿರುವಂತಹ ಕಾರ್ಮಿಕರ ಉತ್ತರಾಧಿಕಾರಗಳಿಗೆ ಬಾಕಿ ಹಣವನ್ನು ಪಡೆಯಲು ಅವಕಾಶ ನೀಡಬೇಕು ಎಂದು ಅಫಿಡವಿಟ್​ನ್ನು ಸಲ್ಲಿಸಿದೆ. ಇನ್ನು ಜುಲೈನಿಂದ ಅಕ್ಟೋಬರ್​ವರೆಗೆ ಕಾರ್ಮಿಕರ ಸಂಬಳವನ್ನು ನೀಡಬೇಕು ಎಂದು ತೀರ್ಪು ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net