ಫಿಕ್ಸ್​ ಆಯ್ತು 'ಸಲಾರ್​' ಟ್ರೇಲರ್​​ ರಿಲೀಸ್​ ಡೇಟ್​?

Untitled design - 2023-08-29T160419.678
Published on

ಆಂಧ್ರಪ್ರದೇಶ: ಟಾಲಿವುಡ್​ ರೆಬೆಲ್​ ಸ್ಟಾರ್​, ಡಾರ್ಲಿಂಗ್​ ಪ್ರಭಾಸ್ ಮತ್ತು 'ಕೆಜಿಎಫ್'​ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್​ ನಿರ್ದೇಶನದ ಬಹುನಿರೀಕ್ಷಿತ 'ಸಲಾರ್'​ ಚಿತ್ರದ ಬಿಡುಗಡೆಯತ್ತ ಇದೀಗ ಅಭಿಮಾನಿಗಳ ಚಿತ್ತ ಮೂಡಿದೆ. ಸದ್ಯ ಚಿತ್ರದ ಟ್ರೇಲರ್​ ಬಗ್ಗೆ ಪ್ರಭಾಸ್​ ಫ್ಯಾನ್ಸ್​ ಕಾತರ ವ್ಯಕ್ತಪಡಿಸಿದ್ದು, ಇತ್ತೀಚಿನ ವರದಿ ಪ್ರಕಾರ ಟ್ರೇಲರ್​ ದಿನಾಂಕ ನಿಗದಿಯಾಗಿದೆ ಎಂದು ಹೇಳಲಾಗಿದೆ.

ಈ ಹಿಂದೆ ರಿಲೀಸ್​ ಆಗಿದ್ದ ಚಿತ್ರದ ಟೀಸರ್​ ಭರ್ಜರಿ ದಾಖಲೆ ಬರೆಯುವ ಮುಖೇನ ಪ್ರೇಕ್ಷಕರಲ್ಲಿ 'ಸಲಾರ್'​ ಬಗ್ಗೆ ಮತ್ತಷ್ಟು ನಿರೀಕ್ಷೆಗಳು ಹೆಚ್ಚುವಂತೆ ಮಾಡಿದೆ. ಟೀಸರ್​ಗೆ ಒದಗಿ ಬಂದ ವ್ಯಾಪಕ ಮೆಚ್ಚುಗೆಗಳ ಬೆನ್ನಲ್ಲೇ ಇದೀಗ ಟ್ರೇಲರ್​ ಬಿಡುಗಡೆ ಕುರಿತು ವದಂತಿಗಳು ಹೆಚ್ಚಿವೆ. ಪ್ರಭಾಸ್​ ಮತ್ತು ಶ್ರುತಿ ಹಾಸನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಟ್ರೇಲರ್​ ಅನ್ನು ಸೆಪ್ಟೆಂಬರ್ 3, 2023 ರಂದು ರಿಲೀಸ್​ ಆಗಲಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವದಂತಿಗಳು ವ್ಯಾಪಕವಾಗಿ ಹರಿದಾಡುತ್ತಿದ್ದು, ಚಿತ್ರತಂಡ ಘೋಷಿಸುವ ಅಧಿಕೃತ ಮಾಹಿತಿಗಾಗಿ ಕಾಯಬೇಕಿದೆ. ಚಿತ್ರ ತಯಾರಕರು ತಿಳಿಸಿರುವಂತೆ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್'​ ಸೆಪ್ಟೆಂಬರ್ 28, 2023 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಚಿತ್ರದಲ್ಲಿ ಸರಣ್ ಶಕ್ತಿ, ಜಗಪತಿ ಬಾಬು, ಪೃಥ್ವಿರಾಜ್ ಸುಕುಮಾರನ್, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಸೇರಿದಂತೆ ಮುಂತಾದವರ ತಾರಗಣವಿದೆ. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ಸಂಯೋಜಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್​ನಲ್ಲಿ ಸಲಾರ್​ ರಿಲೀಸ್​ ಆಗಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net