ದಾಖಲೆ ಬರೆದ 'ಸಲಾರ್' ಟೀಸರ್; ಸಂಚಲನ ಮೂಡಿಸಿದ ಪ್ರಭಾಸ್-ನೀಲ್​​ ಕಾಂಬಿನೇಷನ್​!

salaar
Published on

ಬೆಂಗಳೂರು: ಟಾಲಿವುಡ್​ ರೆಬೆಲ್​ ಸ್ಟಾರ್​​, ಡಾರ್ಲಿಂಗ್ ಪ್ರಭಾಸ್​ ನಟನೆಯ ಬಹುನಿರೀಕ್ಷಿತ ಸಲಾರ್ ಚಿತ್ರದ ಟೀಸರ್​​ ಗರುವಾರ ಬಿಡುಗಡೆಗೊಂಡಿದ್ದು, ದಿನದ ಅಂತ್ಯಕ್ಕೆ ಅಧಿಕ ವೀಕ್ಷಣೆ ಪಡೆದುಕೊಳ್ಳುವ ಮೂಲಕ ಹೊಸದೊಂದು ದಾಖಲೆ ನಿರ್ಮಿಸಿದೆ.

ಸಲಾರ್​ ಭಾಗ 1ರ ಟೀಸರ್​​ ರಿಲೀಸ್​​ಗೂ ಮುನ್ನ ಕೆರಳಿಸಿದ ಕುತೂಹಲವನ್ನು ಬಿಡುಗಡೆಯಾದ ಬಳಿಕ ಮತ್ತಷ್ಟು ಹೆಚ್ಚಿಸಿದೆ. ನಟ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಅವರ ಕಾಂಬಿನೇಷನ್​ ಟೀಸರ್​​ನಲ್ಲಿ ಮೋಡಿ ಮಾಡಿದ್ದು, ಸಿನಿಪ್ರೇಕ್ಷಕರಲ್ಲಿ ಟ್ರೇಲರ್​​ ಮತ್ತು ಸಿನಿಮಾ ಕುರಿತು ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಏನಿದು ದಾಖಲೆ?: ಸಲಾರ್ ಟೀಸರ್ ಯೂಟ್ಯೂಬ್​​ನಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡಿದ್ದು, ಇದು ಭಾರತದಲ್ಲೇ ಅತೀ ಹೆಚ್ಚು ವೀಕ್ಷಣೆಗೆ ಒಳಪಟ್ಟ ಟೀಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ 24 ಗಂಟೆಗಳಲ್ಲಿ 85 ಮಿಲಿಯನ್ ವೀಕ್ಷಣೆಗಳು ಮತ್ತು 1.6 ಮಿಲಿಯನ್ ಲೈಕ್​ಗಳು ಟೀಸರ್​​ಗೆ ಲಭಿಸಿದೆ. ಈ ಹಿಂದೆ ಕೆಜಿಎಫ್-2, ರಾಧೆ ಶ್ಯಾಮ್ ಮತ್ತು ಆದಿಪುರುಷ್​​ ಸಿನಿಮಾಗಳ ಟೀಸರ್​​ ಇದೇ ರೀತಿ ಸದ್ದು ಮಾಡಿತ್ತು. ಈ ಪೈಕಿ ಒಟ್ಟು ಮೂರು ಚಿತ್ರಗಳು ಪ್ರಭಾಸ್​ ಅವರದ್ದೇ ಆಗಿರುವುದು ಇದೀಗ ಅವರ ಅಭಿಮಾನಿಗಳಿಗೆ ಸಂತಸ ನೀಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net