ರಿಲೀಸ್​ ವದಂತಿಗಳಿಗೆ ತೆರೆಎಳೆದ 'ಸಲಾರ್' ಚಿತ್ರತಂಡ​; ಹೊರಬಿತ್ತು ಅಧಿಕೃತ ಘೋಷಣೆ!

Untitled design - 2023-09-29T112209.374
Published on

ಬೆಂಗಳೂರು: ಟಾಲಿವುಡ್​ನ ರೆಬೆಲ್ ಸ್ಟಾರ್​, ಡಾರ್ಲಿಂಗ್​ ಪ್ರಭಾಸ್​ ಮತ್ತು ನಿರ್ದೇಶಕ ಪ್ರಶಾಂತ್ ನೀಲ್​ ಕಾಂಬಿನೇಷನ್​ನಲ್ಲಿ ತೆರೆಗೆ ಅಪ್ಪಳಿಸಲು ಸಜ್ಜಾಗಿರುವ ಬಹುನಿರೀಕ್ಷಿತ 'ಸಲಾರ್ ಭಾಗ 1'ರ ರಿಲೀಸ್​ ದಿನಾಂಕ ಇದೀಗ ಅಧಿಕೃತವಾಗಿ ಘೋಷಣೆಯಾಗಿದೆ.

ಪ್ರಭಾಸ್ ಮತ್ತು ಶ್ರುತಿ ಹಾಸನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಸಲಾರ್'​ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಕಳೆದ ಒಂದು ತಿಂಗಳಿನಿಂದ ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದವು. ಇದಕ್ಕೆ ತಕ್ಕಂತೆ ಚಿತ್ರತಂಡವು ಕೂಡ ಸಿನಿಮಾದ ಕೆಲ ಕೆಲಸಗಳಲ್ಲಿ ಅಗತ್ಯವಿದ್ದ ಬದಲಾವಣೆಯ ಹಿನ್ನೆಲೆ ರಿಲೀಸ್​ ಡೇಟ್​ ಮುಂದೂಡಿತ್ತು. ಇಂದು ಅಧಿಕೃತ ದಿನಾಂಕ ಘೋಷಿಸುವ ಮುಖೇನ ವದಂತಿಗಳಿಗೆ ತೆರೆ ಎಳೆದಿದೆ.

'ಸಲಾರ್'​ ಡಿಸೆಂಬರ್ 22, 2023 ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ಚಿತ್ರ ರಿಲೀಸ್​ಗೆ ಸಜ್ಜಾಗಿದೆ.

ಈ ಸಂದರ್ಭದಲ್ಲಿ ಚಿತ್ರತಂಡ ಆಕರ್ಷಕ ಪೋಸ್ಟರ್​ವೊಂದನ್ನು ಅನಾವರಣಗೊಳಿಸಿದೆ. ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಟಿನ್ನು ಆನಂದ್ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net