ಬಾಕ್ಸ್​ ಆಫೀಸ್​ನಲ್ಲಿ 'ಸಲಾರ್‌' ಅಬ್ಬರ! ಅಮೆರಿಕಾದಲ್ಲಿ ಗಳಿಸಿದ್ದೆಷ್ಟು? ಇಲ್ಲಿದೆ ಮಾಹಿತಿ

ವಿಜಯವಾಣಿ - 2023-12-27T080954.255
Published on

ಮುಂಬೈ: ಟಾಲಿವುಡ್ ರೆಬೆಲ್ ಸ್ಟಾರ್​ ಪ್ರಭಾಸ್​ ನಟನೆಯ ಹಾಗೂ 'ಕೆಜಿಎಫ್' ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ 'ಸಲಾರ್: ಭಾಗ 1' ಚಿತ್ರ ಇದೇ ಡಿಸೆಂಬರ್​ 22 ರಂದು ಜಾಗತಿಕವಾಗಿ ಬಿಡುಗಡೆಗೊಂಡು ಭಾರತೀಯ ಬಾಕ್ಸ್​ ಆಫೀಸ್​​ನಲ್ಲಿ ಅಬ್ಬರಿಸಿದೆ. ರಿಲೀಸ್​ ಆಗಿ 5 ದಿನಕ್ಕೆ ಹೆಜ್ಜೆಯಿಟ್ಟಿರುವ ಸಲಾರ್,​ ಇಂಡಿಯನ್​ ಬಾಕ್ಸ್​ ಆಫೀಸ್​ ಹಾಗೂ ಅಮೆರಿಕಾದಲ್ಲಿ ಒಟ್ಟು ಗಳಿಸಿದ್ದೆಷ್ಟು ಎಂಬುದರ ವಿವರ ಹೀಗಿದೆ ನೋಡಿ.

ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್​​ನಲ್ಲಿ ಮೂಡಿಬಂದ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಸಿನಿಪ್ರೇಕ್ಷಕರು ದೊಡ್ಡ ಪರದೆಯ ಮೇಲೆ ಸಿನಿಮಾ ನೋಡಿ, ಇದೀಗ ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ್ಯಕ್ಷನ್​, ಮಾಸ್​ ಜಾನರ್​ ಹೊಂದಿರುವ 'ಸಲಾರ್'​ ಸದ್ಯ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಮಿಂಚಿನ ಓಟ ಆರಂಭಿಸಿದ್ದು, ಐದನೇ ದಿನಕ್ಕೆ 274 ಕೋಟಿ ರೂ. ಗಳಿಕೆ ಕಂಡಿದೆ.

ಈಗಾಗಲೇ ಅಮೆರಿಕಾ ಬಾಕ್ಸ್ ಆಫೀಸ್​ನಲ್ಲಿಯೂ ಅಬ್ಬರಿಸಿರುವ 'ಸಲಾರ್'​ 6.8 ಮಿಲಿಯನ್ ಡಾಲರ್​ ಗಳಿಕೆಯನ್ನು ಮೀರಿದ್ದು, ಕ್ರಿಸ್‌ಮಸ್ ಹಬ್ಬದ ರಜೆ ದಿನಗಳನ್ನು ಒಳಗೊಂಡಂತೆ ಶೀಘ್ರವೇ 10 ಮಿಲಿಯನ್ ಡಾಲರ್​ ಅನ್ನು ದಾಟಲಿದೆ ಎಂದು ನಿರೀಕ್ಷಿಸಲಾಗಿದೆ.

ಚಿತ್ರದಲ್ಲಿ ಪ್ರಭಾಸ್​, ಶ್ರುತಿ ಹಾಸನ್, ಜಗಪತಿ ಬಾಬು, ಬಾಬಿ ಸಿಂಹ, ತಿನ್ನು ಆನಂದ್, ಈಶ್ವರಿ ರಾವ್ ಶ್ರೀಯಾ ರೆಡ್ಡಿ ಮುಂತಾದವರ ತಾರಾಗಣವಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಈ ಚಿತ್ರಕ್ಕೆ ರವಿ ಬಸ್ರೂರ್ ಅವರ ಸಂಗೀತವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net