

ಹೈದ್ರಾಬಾದ್: ಟಾಲಿವುಡ್ ನಟ ಪ್ರಭಾಸ್ ಬಾಹುಬಲಿ ಸಿನಿಮಾ ಹಿಟ್ ಆದ ನಂತರ ಇಂದು ಫ್ಯಾನ್ ಇಂಡಿಯಾ ಸ್ಟಾರ್ ನಟನಾಗಿ ಹೊರಹೊಮ್ಮಿದ್ದಾರೆ. ಈ ನಟನ ಹೆಸರಿನ ಕುರಿತಾಗಿ ಇಂಟ್ರಸ್ಟಿಂಗ್ ಸಂಗತಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಪ್ರಭಾಸ್ ಅವರ ಆಧಾರ್ ಕಾರ್ಡ್ ಫೋಟೋ ಒಂದು ನೆಟ್ಟಿಗರ ಗಮನ ಸೆಳೆದಿದ್ದು, ಇವರ ನಿಜವಾದ ಹೆಸರನ್ನು ಕಂಡಂತಹ ಅಭಿಮಾನಿಗಳು ಅಚ್ಚರಿಗೊಳಗಾಗಿದ್ದಾರೆ. ಪ್ರಭಾಸ್ ಅವರ ನಿಜವಾದ ಹೆಸರು ಏನು ಎನ್ನುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ.
ಇತ್ತೀಚಿಗೆ ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಆಧಾರ್ ಕಾರ್ಡ್‌ನಿಂದ ಪ್ರಭಾಸ್ ಸಾಕಷ್ಟು ಗಮನ ಸೆಳೆದಿದ್ದಾರೆ. ಕಾರ್ಡ್‌ನಲ್ಲಿ ನಟನ ಹೆಸರನ್ನು ಉಪ್ಪಲಪತಿ ವೆಂಕಟ ಸೂರ್ಯನಾರಾಯಣ ಪ್ರಭಾಸ್ ರಾಜು ಎಂದು ಗುರುತಿಸಲಾಗಿದೆ, ಅವರು ಅಕ್ಟೋಬರ್ 23, 1979 ರಂದು ಜನಿಸಿದರು, ಆಧಾರ್ ಸಂಖ್ಯೆ 5986 6623 9932 ಎನ್ನುವ ಮಾಹಿತಿ ಇರುವ ಆಧಾರ್ ಕಾರ್ಡ್ ಫೋಟೋವೊಂದು ವೈರಲ್ ಆಗಿದೆ.
ಬಾಹುಬಲಿ ಚಲನಚಿತ್ರವು ನಟನನ್ನು ಅಂತರರಾಷ್ಟ್ರೀಯ ಮನ್ನಣೆಗೆ ಪಾತ್ರವಾಯಿತ್ತು. ಪ್ರಭಾಸ್ ನಾಯಕತ್ವದಲ್ಲಿ, ಬಾಹುಬಲಿ 2 ಭಾರತೀಯ ಚಲನಚಿತ್ರೋದ್ಯಮದಲ್ಲಿ ಗಮನಾರ್ಹ ಬಾಕ್ಸ್ ಆಫೀಸ್ ದಾಖಲೆಗಳನ್ನು ಸ್ಥಾಪಿಸಿತು. ಬಾಹುಬಲಿ ಫ್ರ್ಯಾಂಚೈಸ್‌ಗೆ ಹೆಸರುವಾಸಿಯಾದ ನಟ ಇತ್ತೀಚೆಗೆ ಬಿಡುಗಡೆಯಾದ ಚಿತ್ರ ಆದಿಪುರುಷಕ್ಕೆ ನೀರಸ ಪ್ರತಿಕ್ರಿಯೆಯನ್ನು ಪಡೆದರು. ಸಿನಿಮಾ ನಿರೀಕ್ಷೆಗೂ ಮೀರಿ ಕುಸಿದಿದೆ. ಸಲಾರ್ ಸಿನಿಮಾ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಮಿಶ್ರ ವಿಮರ್ಶೆಗಳನ್ನು ಗಳಿಸಿತು.