

ಕಡೂರು: ಸಮಾನತೆಯ ಬದುಕಿಗೆ ಹೆಚ್ಚು ಮಹತ್ವ ನೀಡಿ ಬಂಜಾರ ಸಮುದಾಯದ ಉನ್ನತಿಗಾಗಿ ಹೋರಾಡಿದ ಮಹಾನ್ ಸಂತ ಸೇವಾಲಾಲ್ ಎಂದು ಬಿಜೆಪಿ ಮುಖಂಡ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.
ತಾಲೂಕಿನ ಎನ್.ಜಿ.ಕೊಪ್ಪಲು ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಬಳಿಕ ಮಾತನಾಡಿದರು.
ತನ್ನ ಸಮುದಾಯ ಒಗ್ಗೂಡಿಸಲು ಅವಿರತ ಶ್ರಮಿಸಿದರು. ಸ್ವಾರ್ಥರಹಿತ ಹೋರಾಟದ ಮೂಲಕ ತಮ್ಮ ಜೀವನವನ್ನೇ ಸಮುದಾಯಕ್ಕಾಗಿ ಮುಡಿಪಾಗಿಟ್ಟಿದ್ದರು. ಸಂತ ಸೇವಾಲಾಲ್ ಪವಾಡ ಪುರುಷರಾಗಿ ಸಮಾಜದಲ್ಲಿನ ಮೌಢ್ಯತೆ ತೊಡೆದು ಹಾಕುವ ಮೂಲಕ ಅಪಾರ ಬದಲಾವಣೆ ತಂದು ಸಾಂಸ್ಕೃತಿಕ ರಾಯಭಾರಿಯಾದರು ಎಂದರು.
ಗ್ರಾಪಂ ಸದಸ್ಯ ಗಿರೀಶ್ ನಾಯ್ಕ, ಮುಖಂಡರಾದ ರಮೇಶ್ ನಾಯ್ಕ, ಚರಣ್‌ನಾಯ್ಕ, ದಿನೇಶ್, ಲಚ್ಚಾನಾಯ್ಕ, ಭರತ್‌ನಾಯ್ಕ ಮತ್ತಿತರಿದ್ದರು. ಗ್ರಾಮದಲ್ಲಿ ಅದ್ದೂರಿಯ ಮೆರವಣಿಗೆ ನಡೆಯಿತು.