

ಮುಂಬೈ:ಜ.16ರಂದು ಮುಂಬೈನ ಬಾಂದ್ರದಲ್ಲಿ ಸೈಫ್ ಮೇಲೆ ಮಾರಂಣಾತಿಕ ಹಲ್ಲೆ(ಚಾಕು ಇರಿತ) ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ತನಿಖೆ ಪ್ರಕ್ರಿಯಲ್ಲಿರುವುದು ಒಂದಡೆಯಾದರೆ ಸೈಫ್ ಶೀಘ್ರ ಚೇತರಿಕೆಯ(Speedy Recovery) ಬಗ್ಗೆ ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೆ ಸೈಫ್ ಸಹೋದರಿ ಸಬಾಅಲಿ ಪಾಟೌಡಿ ಟ್ರೋಲ್ಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಸಬಾಅಲಿ ಪಾಟೌಡಿ ಸೈಫ್ ಶೀಘ್ರ ಚೇತರಿಕೆಯ ಬಗ್ಗೆ ಸ್ವತ ವೈದ್ಯರೇ ಹೇಳಿರವುದರ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
ವೈದ್ಯರು ಸೈಫ್ ಚೇತರಿಕೆ ಬಗ್ಗೆ ಹೇಳಿರುವ ವಿಡಿಯೋಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೇ ವಿಡಿಯೋದ ಕ್ಲಿಪ್ ಅನ್ನು ಸಬಾಅಲಿ ಹಂಚಿಕೊಂಡು ಅದಕ್ಕೆ ಶಿರ್ಷೀಕೆಯೊಂದನ್ನು ನೀಡಿ ಟ್ರೋಲ್ಗೆ ಟ್ರೋಲ್ ಮಾಡಿದ್ದಾರೆ. '' ಹೃದ್ರೋಗ ತಜ್ಞ ದೀಪಕ್ ಕೃಷ್ಣ ಮೂರ್ತಿ ಅವರು ಅನುಮಾನಗಳನ್ನು ತಳ್ಳಿ ಹಾಕಿದ್ದು, ಸೈಫ್ ಮೇಲೆ 5 ಇರಿತ ನಂತರ ಚೇತರಿಸಿಕೊಂಡಿರವುದು ನಿಜ. ಇದು ಇವರ ವಿಷಯದಲ್ಲಿ ಮಾತ್ರವಲ್ಲ, ಹೃದಯ ಬೈಪಾಸ್ ಶಸ್ತ್ರಚಿಕಿತ್ಸಗೆ ಒಳಾಗದವರು ಕೂಡ ಮೂರು ಮತ್ತು ನಾಲ್ಕೆನೇ ದಿನಗಳಲ್ಲಿಯೇ ಮಹಡಿ ಮೆಟ್ಟಿಲುಗಳನ್ನು ಹತ್ತುತ್ತಾರೆ. ಆದರೆ, ಸೈಫ್ ವಿಚಾರದಲ್ಲಿ ಅದು ಶೀಘ್ರ ಸಾಧ್ಯವಾಗಿದೆ ಎಂದು ವೈದ್ಯರು ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ.''
ಇದೇ ವಿಡಿಯೋ ಸಬಾ ಅಲಿ ಹಂಚಿಕೊಂಡು ಅದಕ್ಕೆ ಶಿರ್ಷೀಕೆಯೊಂದನ್ನು ನೀಡಿದ್ದಾರೆ. 'ಶಿಕ್ಷಣ ಪಡೆದುಕೊಳ್ಳಿ' ಎಂದು ಬರೆದುಕೊಂಡಿರುವ ಸಬಾ, ಶೀಘ್ರ ಏಕೆ ಎಂಬುವುದನ್ನು ವೈದ್ಯರು ವಿವರಿಸುತ್ತಾರೆ. ಅಲ್ಲದೆ, ಶಿಕ್ಷಣ ಎನ್ನುವ ಪದಕ್ಕೆ ವೃತ್ತಕಾರ ಹಾಕುವ ಮೂಲಕ ಟ್ರೋಲ್ ಮಾಡಿದ್ದಾರೆ. (ಏಜೆನ್ಸೀಸ್)