ಹಾವೇರಿ: ರಾಮನವಮಿಯ ಪ್ರಯುಕ್ತ ಹಾವೇರಿಯ ಅಶ್ವಿನಿ ನಗರದ ಶ್ರೀ ಸಾಯಿ ಮಂದಿರಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಭಾನುವಾರ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡರು. ದೇವಸ್ಥಾನದ ಸಮಿತಿ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಭರತ ಬೊಮ್ಮಾಯಿ ಹಾಗೂ ದೇವಸ್ಥಾನದ ಸಮಿತಿ ಸದಸ್ಯರು ಇದ್ದರು.