ಪಿಆರ್​ ಏಜೆನ್ಸಿಗಳ ಕುರಿತು ಸೌತ್​​ ಬ್ಯೂಟಿ Sai Pallavi ಹೀಗೆಳಿದ್ದೇಕೆ..

Actress Sai Pallavi
Published on

ಚೈನ್ನೈ: ಸೌತ್​ ಸಿನಿಮಾದಲ್ಲಿನ ಟಾಪ್​ ನಟಿಯರಲ್ಲಿ ಸಾಯಿ ಪಲ್ಲವಿ(Sai Pallavi) ಕೂಡ ಒಬ್ಬರು. ಇವರು ತಮಗೆ ಬರುವ ಎಲ್ಲಾ ಕಥೆಗಳಿಗೆ ಗ್ರೀನ್​ಸಿಗ್ನಲ್​ ನೀಡಿ ಸಿನಿಮಾ ಮಾಡುವ ನಟಿಯಲ್ಲಿ. ನಟನೆಗೆ ಪ್ರಾಶಸ್ತ್ಯವಿರುವ ಕಥೆ ಮತ್ತು ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಚಿತ್ರದ ಭಾಗವಾಗುತ್ತಾರೆ. ಮೇಕಪ್​ ಇಲ್ಲದೆಯೆ ತಮ್ಮ ಸಹಜ ಸೌಂದರ್ಯ ಹಾಗೂ ಡ್ಯಾನ್ಸ್​​ನಿಂದ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ಸಾಯಿ ಪಲ್ಲವಿ ಬಾಲಿವುಡ್​​​ಗೆ ಪ್ರವೇಶಿಸಿರುವ ವಿಚಾರ ಗೊತ್ತೆ ಇದೆ.

ವಿವಾದಗಳಿಂದ ದೂರ ಇರಲು ಬಯಸುವ ನಟಿ ಸಾಯಿ ಪಲ್ಲವಿ ಇತ್ತೀಚಿನ ಸಂದರ್ಶನವೊಂದರಲ್ಲಿ ನನಗೆ ಪಿಆರ್​​(PR) ಏಜೆನ್ಸಿಗಳ ಅಗತ್ಯವಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೆ ಪಿಆರ್ ಏಜೆನ್ಸಿಯನ್ನು ಹೊಂದಲು ಏಕೆ ಇಷ್ಟಪಡುವುದಿಲ್ಲ ಎಂಬುದನ್ನು ವಿವರಿಸಿದ್ದಾರೆ. ಬಾಲಿವುಡ್‌ನಲ್ಲಿ ನನ್ನ ಪರಿಚಯಸ್ಥ ಮಹಿಳೆಯೊಬ್ಬರು ನನಗೆ PR ಏಜೆನ್ಸಿ ಬೇಕೇ ಎಂದು ಕೇಳಿದ್ದರು. ಆದರೆ ನನಗೆ ಅದರ ಅಗತ್ಯವೇನೆಂದು ಅರ್ಥವಾಗಲಿಲ್ಲ, ಏಕೆಂದರೆ ಸಿನಿಮಾ ಮಾಡುವಾಗ ನಾನು ಸಂದರ್ಶನಗಳನ್ನು ನೀಡುತ್ತೇನೆ ಎಂದು ಹೇಳಿದ್ದಾರೆ.

Actress Sai Pallavi

ಬಳಿಕ ನಾನು ಆ ಮಹಿಳೆಯನ್ನು ಪಿಆರ್​ ಏಜೆನ್ಸಿ ಏಕೆ ಬೇಕು ಎಂದು ಕೇಳಿದೆ, ಅದಕ್ಕೆ ಅವರು, ಯಾವುದೇ ಸಿನಿಮಾಗಳು ಬರದಿದ್ದರೂ ಪ್ರೇಕ್ಷಕರು ತನ್ನ ಕುರಿತು ಮಾತನಾಡುವುದು ಮುಖ್ಯ ಎಂದು ಹೇಳಿದರು. ಸಿನಿಮಾ ಮಾಡದಿದ್ದರೂ ಜನರು ತಮ್ಮ ಬಗ್ಗೆ ನಿರಂತರವಾಗಿ ಮಾತನಾಡುತ್ತಿದ್ದರೆ ಸ್ವಲ್ಪ ಸಮಯದ ನಂತರ ಬೇಸರವಾಗುವುದಿಲ್ಲವೇ ಎಂದು ಹೇಳಿದರು. ಅಲ್ಲದೆ ಕೆಲವು ವಿಷಯಗಳನ್ನು ಖಾಸಗಿಯಾಗಿಡಲು ಇಷ್ಟಪಡುವುದಾಗಿ ಹಾಗೂ ಪ್ರಪಂಚದ ಮುಂದೆ ತನ್ನ ನೈಜ ಇಮೇಜ್‌ಗೆ ತಕ್ಕಂತೆ ಬದುಕಲು ಇಷ್ಟಪಡುತ್ತೇನೆ ಎಂದು ತಿಳಿಸಿದರು.

ಅದೇ ಸಮಯದಲ್ಲಿ ನಿರ್ದಿಷ್ಟ ಇಮೇಜ್ ಅನ್ನು ಕಾಪಾಡಿಕೊಳ್ಳಲು ಸ್ಟಾರ್‌ಗಳು ಹೇಗೆ ಒತ್ತಡದಲ್ಲಿದ್ದಾರೆ ಎಂಬುದರ ಕುರಿತು ಮಾತನಾಡಿದ ನಟಿ ಸಾಯಿ ಪಲ್ಲವಿ ಲೈಮ್‌ಲೈಟ್‌ನಿಂದ ದೂರ ಉಳಿಯಲು ಇಷ್ಟಪಡುತ್ತೇನೆ ಎಂದಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅದು ಸಾಮಾಜಿಕ ನಿಯಮಗಳಿಗೆ ಅನುಗುಣವಾಗಿದ್ದರೆ ಮಾತ್ರ ನಾನು ನಾನಾಗಿರಬಲ್ಲೆ. ನಾನು ನಾನಲ್ಲದಿದ್ದರೆ ನನಗೆ ಅನಾನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

ನಿತೇಶ್​ ತಿವಾರಿ ನಿರ್ದೇಶಿಸುತ್ತಿರುವ ರಾಮಾಯಣ ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮನ ಪಾತ್ರದಲ್ಲಿ ರಣಬೀರ್​ ಕಪೂರ್​​​ ಮತ್ತು ರಾವಣನ ಪಾತ್ರದಲ್ಲಿ ಯಶ್​​ ಕಾಣಿಸಿಕೊಳ್ಳಲಿದ್ದಾರೆ. ರಾಜ್‌ಕುಮಾರ್ ಪೆರಿಯಸಾಮಿ ಅವರ ಮುಂಬರುವ ಚಿತ್ರ ಅಮರನ್‌ನಲ್ಲಿ ಹಾಗೂ ನಾಗಚೈತನ್ಯಗೆ ಜೋಡಿಯಾಗಿ ತಾಂಡೇಲ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.(ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net