"ನನಗೆ ಅದು ಇಷ್ಟವಿಲ್ಲ"ನಟಿ ಸಾಯಿ ಪಲ್ಲವಿ ಓಪನ್ ಟಾಕ್!...sai pallavi

sai pallavi
Published on

ಹೈದರಾಬಾದ್​: ( sai pallavi )  ನಟ ಶಿವಕಾರ್ತಿಕೇಯನ್ ಜೊತೆ ಸಾಯಿ ಪಲ್ಲವಿ ನಟಿಸಿದ ಅಮರನ್ ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿನ ತಮ್ಮ ಅಭಿನಯದಿಂದ ತಮಿಳು ಅಭಿಮಾನಿಗಳಲ್ಲಿ ಬಹಳ ಜನಪ್ರಿಯರಾದರು.  ನಟಿ ಇದೀಗ ಸಂದರ್ಶನವೊಂದರಲ್ಲಿ ಫೋಟೋ ತೆಗೆಯುವ ವಿಚಾರವಾಗಿ ಮಾತನಾಡಿ ಬೇಸರ ಹೋರ ಹಾಕಿದ್ದಾರೆ.

ನಟಿ ಸಾಯಿ ಪಲ್ಲವಿ ವ ಸಂದರ್ಶನದಲ್ಲಿ ಮಾತನಾಡಿ,  ಪ್ರತಿಯೊಬ್ಬರಿಗೂ ಅವರವರ ಇಷ್ಟ-ಕಷ್ಟಗಳಿರುವುದು ಸಹಜ.  ಕೆಲವೊಮ್ಮೆ ನಮ್ಮನ್ನು ಹಿಂಬಾಲಿಸುವುದು ಭಯ ಹುಟ್ಟಿಸುತ್ತದೆ. ನಾನು ಸಾರ್ವಜನಿಕ ಸ್ಥಳಗಳಿಗೆ ಹೋದಾಗ ನನ್ನ ಚಿತ್ರಗಳನ್ನು ತೆಗೆಯುವುದು ನನಗೆ ಇಷ್ಟವಿಲ್ಲ ಎಂದು ಅವರು ಹೇಳಿದರು.

ನಾನು ಹೋದಲ್ಲೆಲ್ಲಾ ಜನರು ನನ್ನ ಫೋಟೋ ತೆಗೆಯುವುದು ನನಗೆ ಇಷ್ಟವಿಲ್ಲ. ನಾನು ಬದಲಾಯಿಸಲಾಗದ ಅಥವಾ ಮೌಲ್ಯಯುತವಾದ ಕಟ್ಟಡವಲ್ಲ, ನಾನು ಜೀವಂತ ಮನುಷ್ಯ. ನನ್ನ ಅನುಮತಿಯೊಂದಿಗೆ ನೀವು ಫೋಟೋ ತೆಗೆದರೆ ಅದು ತುಂಬಾ ಒಳ್ಳೆಯದು ಎಂದಿದ್ದಾರೆ.

ನಟಿ ಸಾಯಿ ಪಲ್ಲವಿ ತೆಲುಗಿನ ತಾಂಡೇಲ್ ಚಿತ್ರದ ಶೂಟಿಂಗ್ ಮುಗಿಸಿದ್ದು, ಸದ್ಯಕ್ಕೆ ರಾಮಾಯಣದಲ್ಲಿ 2 ವರ್ಷ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ರಾಮಾಯಣ ಚಿತ್ರ 2 ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಈ ವೇಳೆ ಮೊದಲ ಅಧ್ಯಾಯ 2026ರ ದೀಪಾವಳಿಗೆ ಹಾಗೂ ಎರಡನೇ ಭಾಗ 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net