ಮದುವೆ ವದಂತಿಗೆ ನಟಿ ಸಾಯಿ ಪಲ್ಲವಿ ಕೊಟ್ಟ ಉತ್ತರ ಹೀಗಿದೆ

Untitled design - 2023-09-22T160801.756
Published on

ಆಂಧ್ರಪ್ರದೇಶ: ನ್ಯಾಚುರಲ್ ಬ್ಯೂಟಿ, ಬಹುಭಾಷಾ ನಟಿ ಸಾಯಿ ಪಲ್ಲವಿ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ವದಂತಿಗಳು ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ ಇದೀಗ ಸ್ವತಃ ನಟಿಯೇ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಉತ್ತರಿಸುವ ಮುಖೇನ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ತಮಿಳು ನಿರ್ದೇಶಕ ರಾಜ್​ಕುಮಾರ್​ ಪೆರಿಯಸ್ವಾಮಿ ಜತೆ ಸಾಯಿ ಪಲ್ಲವಿ ಮದುವೆಯಾಗಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮೂಲಕ ವೈರಲ್​ ಆಗಿತ್ತು. ಈ ಫೋಟೋಗಳು ಅವರ ಅಭಿಮಾನಿಗಳಲ್ಲಿ ಮತ್ತು ನೆಟ್ಟಿಗರಲ್ಲಿ ಸಾಕಷ್ಟು ಗೊಂದಲವನ್ನು ಮೂಡಿಸಿತ್ತು. ಸದ್ಯ ಈ ನೆಗೆಟಿವ್​ ವಿಚಾರಗಳಿಂದ ತೀವ್ರ ಅಸಮಾಧಾನಗೊಂಡ ನಟಿ, ಅಸಲಿ ಫೋಟೋಗಳ ಮುಖೇನ ಇದೀಗ ಖಡಕ್​ ಉತ್ತರ ರವಾನಿಸಿದ್ದಾರೆ.

"ಪ್ರಾಮಾಣಿಕವಾಗಿ, ನಾನು ವದಂತಿಗಳಿಗೆ ಹೆದರುವುದಿಲ್ಲ. ಆದ್ರೆ, ಅದು ಕುಟುಂಬ ಮತ್ತು ಸ್ನೇಹಿತರನ್ನು ಒಳಗೊಂಡಿರುವಾಗ, ನಾನು ಸ್ಪಷ್ಟನೆ ಕೊಡಲೇಬೇಕು. ನನ್ನ ಚಿತ್ರದ ಪೂಜಾ ಸಮಾರಂಭದ ಚಿತ್ರವನ್ನು ಉದ್ದೇಶಪೂರ್ವಕವಾಗಿ ಕ್ರಾಪ್ ಮಾಡಲಾಗಿದೆ ಮತ್ತು ಅಸಹ್ಯಕರ ಉದ್ದೇಶಗಳೊಂದಿಗೆ ಪ್ರಸಾರ ಮಾಡಲಾಗಿದೆ" ಎಂದು ಹೇಳಿದರು.

"ನನ್ನ ಮುಂಬರುವ ಕೆಲಸಗಳ ಬಗ್ಗೆ ಉತ್ಸಾಹದಿಂದ ಮಾಹಿತಿ ಹಂಚಿಕೊಳ್ಳಲು ಯೋಚನೆ ಮಾಡುವ ಬದಲಿಗೆ ಈ ರೀತಿಯ ಅನಗತ್ಯ ಚುಟುವಟಿಕೆಗಳಿಗೆ ಸ್ಪಷ್ಟನೆ ನೀಡಬೇಕೆಂಬುದು ತೀವ್ರ ಬೇಸರ ಮೂಡಿಸುತ್ತದೆ. ಈ ರೀತಿ ಇರಿಸು ಮುರಿಸು ಉಂಟುಮಾಡುವುದು ಕೆಟ್ಟದು" ಎಂದು ತಮ್ಮ ಫೇಸ್​ಬುಕ್​ನಲ್ಲಿ ಬರೆದು ಪೋಸ್ಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net