ಶ್ರೀ ಸಾಯಿಬಾಬಾ ಮಂದಿರದಲ್ಲಿ ಗುರು ಪೂಣಿರ್ಮೆ ಮಹೋತ್ಸವ

10-RNR-09
Published on

ರಾಣೆಬೆನ್ನೂರ: ಇಲ್ಲಿನ ಶ್ರೀರಾಮ ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುವಾರ ಗುರು ಪೂಣಿರ್ಮೆ ಮಹೋತ್ಸವ ವಿಜೃಂಭಣಿಯಿಂದ ಜರುಗಿತು.

ಬೆಳಗ್ಗೆ ಸಾಯಿಬಾಬಾ ಮೂತಿರ್ಗೆ ವಿಶೇಷ ಕಾಕಡಾರತಿ, ಕ್ಷೀರಾಭಿಷೇಕ ನಡೆಯಿತು. ನಂತರ ಶ್ರೀ ಗಣಪತಿ ಪೂಜೆ, ಶ್ರೀ ಸತ್ಯ ನಾರಾಯಣ ಪೂಜೆ, ನೇವೇದ್ಯಾರತಿ, ಮಧ್ಯಾಹ್ನ ಪ್ರಸಾದ ಸೇವೆ ಜರುಗಿತು. ಸಂಜೆ ಧೂಪಾರತಿ, ಪಾಲಕಿ ಉತ್ಸವ ನೆರವೇರಿತು. ಬೆಳಗ್ಗೆಯಿಂದ ರಾತ್ರಿವರೆಗೆ ಸಹಸ್ರಾರು ಭಕ್ತರು ದೇಗುಲಕ್ಕೆ ಆಗಮಿಸಿ, ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net