ಡಿ.9ರಿಂದ 11ರವರೆಗೆ ಕುವೆಂಪು ವಿವಿಯಲ್ಲಿ ಸಹ್ಯಾದ್ರಿ ಉತ್ಸವ

kuvempu university
ಕುವೆಂಪು ವಿಶ್ವವಿದ್ಯಾಲಯ
Published on

ಶಿವಮೊಗ್ಗ: ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾಭವನದಲ್ಲಿ ಡಿ.9ರಿಂದ 11ರವರೆಗೆ ಸಹ್ಯಾದ್ರಿ ಉತ್ಸವ-2024 ಹಮ್ಮಿಕೊಳ್ಳಲಾಗಿದೆ.

ಐದು ವರ್ಷಗಳ ಬಳಿಕ ನಡೆಯುತ್ತಿರುವ ಉತ್ಸವವು ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ವೇದಿಕೆ ಕಲ್ಪಿಸಲಿದ್ದು ಪ್ರಥಮ ಸ್ಥಾನ ಪಡೆದ ತಂಡವು ಡಿ.19ರಿಂದ 23ರವರೆಗೆ ನಡೆಯುವ ದಕ್ಷಿಣ ಪ್ರಾಂತೀಯ ವಿಶ್ವವಿದ್ಯಾಲಯಗಳ ಯುವಜನೋತ್ಸವದಲ್ಲಿ ಭಾಗವಹಿಸಲಿದೆ.

ಮೂರು ದಿನವೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿವಿ ಸಾಕ್ಷಿಯಾಗಲಿದ್ದು ಡಿ.11ರಂದು ಮಧ್ಯಾಹ್ನ 2ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಧ್ಯಕ್ಷತೆ ವಹಿಸುವರು. ಸಿನಿಮಾ ನಟ, ನಿರ್ದೇಶಕ ಡಾ. ರಾಧಾಕೃಷ್ಣ ಪಲ್ಲಕ್ಕಿ ಸಮಾರೋಪ ನುಡಿಗಳನ್ನಾಡುವರು.

ವಿವಿ ಕುಲಸಚಿವ ಎ.ಎಲ್.ಮಂಜುನಾಥ ಬಹುಮಾನ ವಿತರಿಸುವರು. ಕುಲಸಚಿವ ಪ್ರೊ. ಎಸ್.ಎಂ.ಗೋಪಿನಾಥ್, ಹಣಕಾಸು ಅಧಿಕಾರಿ ಪ್ರೊ. ಎಚ್.ಎನ್.ರಮೇಶ್, ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕ ಪ್ರೊ. ಜಿ.ಪ್ರಶಾಂತ್ ನಾಯಕ್ ಮತ್ತಿತರರು ಪಾಲ್ಗೊಳ್ಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net