

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನಾದ ಬಾವುಟದ ವಿನ್ಯಾಸ ಬದಲಾಗಿದೆ. ಇಂದು ನಡೆದ ಸಭೆಯಲ್ಲಿ ಹಿಂದುತ್ವವನ್ನು ಪ್ರತಿಪಾದಿಸುವ ಕೇಸರಿ ಬಣ್ಣದ ಬಾವುಟವನ್ನು ಹಾರಿಸಲಾಯಿತು.
ಬಾಳಾ ಠಾಕ್ರೆ ಅವರ ಜನ್ಮದಿನವಾದ ಇಂದು ಹೀಗೆ ಎಂಎನ್‌ಎಸ್ ಬಾವುಟ ಬದಲಾಯಿಸಿರುವುದು ಕಾಕತಾಳೀಯವಲ್ಲ. ಎಂಎನ್‌ಎಸ್ ಹೊಸ ಧ್ವಜವು ಕೇಸರಿ ಬಣ್ಣದಾಗಿದ್ದು ಅದರಲ್ಲಿ ಛತ್ರಪತಿ ಶಿವಾಜಿಯ ಆಳ್ವಿಕೆಯ ಕಾಲದ ಮುದ್ರೆ ಇದೆ. ಈ ಮೊದಲಿನದು ನೀಲಿ, ಹಸಿರು ಮತ್ತು ಕೇಸರಿ ಬಣ್ಣದಿಂದ ಕೂಡಿತ್ತು. ಅದರಲ್ಲಿ ರೈಲು ಇಂಜಿನ್ನ ಚಿತ್ರವಿತ್ತು.
ಗುರುವಾರ ನಡೆದ ಎಂಎನ್‌ಎಸ್ ಸಭೆಯಲ್ಲಿ ಶಿವಾಜಿ ಮತ್ತು ವೀರ ಸಾವರ್ಕರ್ ಅವರ ಭಾವಚಿತ್ರಗಳಿದ್ದವು. ಸಭೆಯಲ್ಲಿ ರಾಜ್ ಠಾಕ್ರೆ ಅವರ ಮಗ ಅಮಿತ್ ಕೂಡ ಭಾಗವಹಿಸಿದ್ದರು.
200ರಲ್ಲಿ ಶಿವಸೇನಾ ತೊರೆದ ರಾಜ್ ಠಾಕ್ರೆ ಎಂಎನ್‌ಎಸ್ ಕಟ್ಟಿದ್ದರು. ನಂತರ ನಡೆದ ಚುನಾವಣೆಯಲ್ಲಿ ಒಟ್ಟು 289 ಸ್ಥಾನವಿರುವ ಮಹಾರಾಷ್ಟ್ರದಲ್ಲಿ ಎಂಎನ್ಎಸ್ನ ಒಬ್ಬರು ಮಾತ್ರ ಚುನಾಯಿತರಾಗಿದ್ದರು. (ಏಜೆನ್ಸೀಸ್)