

ಬೆಂಗಳೂರು: ಭಟ್ಕಳ ನಿಲ್ದಾಣದಲ್ಲಿ ಸುರಕ್ಷೆತೆಗೆ ಸಂಬಂಧಿಸಿದ ಕಾಮಗಾರಿ ಮೇ 29ರಿಂದ 31ರವರೆಗೆ ನಡೆಯಲಿರುವ ಹಿನ್ನೆಲೆ ಎರಡು ರೈಲುಗಳ ಸಂಚಾರ ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ಕೊಂಕಣ ರೈಲ್ವೆ ತಿಳಿಸಿದೆ.
ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಬುಧವಾರ ಹೊರಡುವ (ಸಂಖ್ಯೆ 16585) ಮುರುಡೇಶ್ವರ ಎಕ್ಸ್ಪ್ರೆಸ್ ರೈಲು ಶಿರೂರು ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ. ಮುರುಡೇಶ್ವರ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್ಪ್ರೆಸ್ ರೈಲು (ಸಂಖ್ಯೆ 16586) ಮೇ 30ರಂದು ಶಿರೂರು ನಿಲ್ದಾಣದಿಂದ ಮಧ್ಯಾಹ್ನ 2.35ಕ್ಕೆ ಹೊರಡಲಿದೆ. ಶಿರೂರು-ಮುರುಡೇಶ್ವರ ನಿಲ್ದಾಣಗಳ ನಡುವೆ ರದ್ದಾಗಲಿದೆ.