

Tourists: ರಾಜಸ್ತಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ವಾಹನವೊಂದು ಕೆಟ್ಟುಹೋದ ಪರಿಣಾಮ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಸುಮಾರು 90 ಜನರು ಕಾಡಿನ ಮಧ್ಯೆ ಸಿಲುಕಿಕೊಂಡಿರುವ ಭಯಾನಯ ದೃಶ್ಯ ಬೆಳಕಿಗೆ ಬಂದಿದೆ.
ಶನಿವಾರ (ಆಗಸ್ಟ್ 16) ದಂದು 6 ಗಂಟೆ ಸುಮಾರಿಗೆ ಅಭಯಾರಣ್ಯದ ವಲಯ 6 ರಲ್ಲಿ ಈ ಘಟನೆ ಸಂಭವಿಸಿದ್ದು, ಪ್ರಯಾಣಿಕರನ್ನು ಕರೆದುಕೊಂಡು ಹೋಗಿದ್ದ ವಾಹನ ತಾಂತ್ರಿಕ ದೋಷದಿಂದ ಕಾಡಿನೊಳಗೆ ನಿಂತಿತ್ತು.ಈ ವೇಳೆ ಮತ್ತೊಂದು ವಾಹನ ತರುವುದಾಗಿ ಹೇಳಿ ವಾಹನವನ್ನು ಬಿಟ್ಟುಹೋದರು. ನಂತರ ಗುಂಪಿನೊಂದಿಗೆ ಅನುಚಿತವಾಗಿ ವರ್ತಿಸಿದ ನಂತರ ಹಿಂತಿರುಗಿ ಬರಲಿಲ್ಲ ಎಂದು ಪ್ರವಾಸಿಗರು ಸಂದರ್ಶಕರು ಹಾಗೂ ಚಾಲಕರ ವಿರುದ್ಧ ಆರೋಪಿಸಿದ್ದಾರೆ.
ಸಿಲುಕಿಕೊಂಡಿರುವ ಪ್ರಯಾಣಿಕರಲ್ಲಿ ಒಬ್ಬರು ಅಲ್ಲಿನ ಸ್ಥಿತಿಗತಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇನ್ನು ಅಲ್ಲಿರುವ ಮಕ್ಕಳು ಮೊಬೈಲ್ ಟಾರ್ಚ್ ಹಿಡಿದು ಕತ್ತಲೆಯಲ್ಲಿ ಕುಳಿತು ಅಳುತ್ತಿರುವ ದೃಶ್ಯ ಸ್ಪಷ್ಟವಾಗಿ ಗೋಚರಿಸಿತ್ತು. ಆ ಕಾಡಿನಲ್ಲಿ ಚಿರತೆಗಳು, ಕರಡಿಗಳು, ಜೌಗು ಮೊಸಳೆಗಳು ಸೇರಿದಂತೆ 60ಕ್ಕೂ ಹೆಚ್ಚು ಹುಲಿಗಳು ವಾಸಿಸುತ್ತವೆ ಎಂದು ಕರೆಯಲ್ಪಡುವ ಈ ಪ್ರದೇಶದಲ್ಲಿ ಸುಮಾರು 7:30ವರೆಗೆ ಪ್ರವಾಸಿಗರು ಆ ಪ್ರದೇಶದಲ್ಲಿ ಕಂಗಾಲಾಗಿ ನಿಂತಿದ್ದರು.
ಮಾಹಿತಿ ತಿಳಿದ ಕ್ಷೇತ್ರ ನಿರ್ದೇಶಕ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನೂಪ್ ನೇತೃತ್ವದಲ್ಲಿ ಪ್ರವಾಸಿಗರನ್ನು ಉದ್ಯಾನವನದಿಂದ ಹೊರತಂದಿದ್ದು, ಘಟನೆಯ ಹೊಣಗಾರಿಕೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು. ಹಾಗೂ ಉದ್ಯಾನವನದಲ್ಲಿ ಪ್ರವಾಸಿಗರ ಸುರಕ್ಷತೆಯೇ ಮುಖ್ಯ. ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಮಾರ್ಗದರ್ಶಕ ಅಥವಾ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಭವಿಷ್ಯದಲ್ಲಿ ಅಂತಹ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಅನೂಪ್ ಸುದ್ದಿಮೂಲಗಳಿಗೆ ತಿಳಿಸಿದ್ದಾರೆ.
ಈ ವಿಚಾರದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಹುಲಿ ಅಭಯಾರಣ್ಯದಲ್ಲಿ ಸಂದರ್ಶಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮಾರ್ಗದರ್ಶಕರು ಮತ್ತು ಚಾಲಕರ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು ಎಂದು ಹೇಳಿದ್ದಾರೆ. (ಏಜೆನ್ಸೀಸ್)