ಮಹಾರಾಷ್ಟ್ರದ ಸಾಧುಗಳ ಹತ್ಯೆಯ ಬೆನ್ನಲ್ಲೇ ಮತ್ತೊಂದು ದುರ್ಘಟನೆ; ಪಂಜಾಬ್​ನಲ್ಲಿ ಹಿಂದು ಸನ್ಯಾಸಿಯನ್ನು ಥಳಿಸಿದ ದುಷ್ಕರ್ಮಿಗಳು

Hindu Monk 25 April 20
Published on

ಪಂಜಾಬ್​: ಮಹಾರಾಷ್ಟ್ರದ ಪಾಲ್ಗಾರ್​ ಗ್ರಾಮದಲ್ಲಿ ಇಬ್ಬರು ಸಾಧುಗಳು ಹಾಗೂ ಅವರ ಕಾರಿನ ಚಾಲಕನನ್ನು ಪೊಲೀಸರ ಎದುರೇ ಗುಂಪು ಹತ್ಯೆ ಮಾಡಲಾಗಿತ್ತು. ಈ ದುರ್ಘಟನೆ ಬಗ್ಗೆ ಇನ್ನೂ ದೇಶಾದ್ಯಂತ ಚರ್ಚೆಯಾಗುತ್ತಿದೆ.
ಪಾಲ್ಗಾರ್​ನಲ್ಲಿ ನಡೆದ ಸಾಧುಗಳ ಹತ್ಯೆಯ ಭೀಕರತೆಯನ್ನು ದೇಶವೇ ಖಂಡಿಸುತ್ತಿದೆ. ಆದರೆ ದುರಂತವೆಂದರೆ ಈಗ ಪಂಜಾಬ್​​ನ ಹೋಶಿಯಾರ್​ಪುರದಲ್ಲಿ ಮತ್ತೊಬ್ಬ ಹಿಂದು ಸನ್ಯಾಸಿಯ ಮೇಲೆ ಭೀಕರ ಹಲ್ಲೆಯಾಗಿದೆ.

ಹೋಶಿಯಾರ್​ಪುರದ ಆಶ್ರಮದಲ್ಲಿದ್ದ ಹಿಂದು ಸನ್ಯಾಸಿ ಸ್ವಾಮಿ ಪುಷ್ಪೇಂದ್ರ ಸ್ವರೂಪ್​ ಅವರ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿ, ಅವರ ಬಳಿಯಿದ್ದ 50,000 ರೂಪಾಯಿಯನ್ನು ದೋಚಿದೆ. ಅಪರಿಚಿತ ಗೂಂಡಾಗಳ ಥಳಿತದಿಂದ ಸ್ವಾಮೀಜಿ ವಿಪರೀತ ಗಾಯಗೊಂಡಿದ್ದಾರೆ.

ಎರಡು ದಿನಗಳ ಹಿಂದೆಯೇ ಘಟನೆ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ. ಸದ್ಯ ಪುಷ್ಪೇಂದ್ರ ಸ್ವರೂಪ್​ ಸ್ವಾಮೀಜಿಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದುರ್ಘಟನೆ ಬಗ್ಗೆ ಪಂಜಾಬ್​ ಗೃಹ ಸಚಿವ ಸೋಮಪ್ರಕಾಶ್​ ಅವರು ವರದಿ ಕೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net