

ಕೊಯಮತ್ತೂರು: ಮಹಾಶಿವರಾತ್ರಿ ಪ್ರಯುಕ್ತ ದೇಶಾದ್ಯಂತ ಶಿವಾರಾಧನೆ ನಡೆಯುತ್ತಿದ್ದು, ಇಂದು ರಾತ್ರಿಯಿಡೀ ಜಾಗರಣೆಯೂ ನಡೆಯಲಿದೆ. ದೇಶದ ಪ್ರಮುಖ ಶಿವಾಲಯಗಳು ಮಾತ್ರವಲ್ಲದೆ, ಕೊಯಮತ್ತೂರಿನ ಆದಿಯೋಗಿ ಕ್ಷೇತ್ರವಾದ ಈಶ ಯೋಗ ಕೇಂದ್ರದಲ್ಲೂ ಸದ್ಗುರು ನೇತೃತ್ವದಲ್ಲಿ ಅದ್ಧೂರಿ ಶಿವರಾತ್ರಿ ಆಚರಣೆ ಆಯೋಜನೆಗೊಂಡಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಿವರಾತ್ರಿ ಪ್ರಯುಕ್ತ ಕೊಯಮತ್ತೂರಿನ ಈಶ ಯೋಗ ಕೇಂದ್ರಕ್ಕೆ ಆಗಮಿಸಿದ್ದು, ಅವರನ್ನು ಸದ್ಗುರು ಅವರು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ. ರಾತ್ರಿಯಿಡೀ ಜಾಗರಣೆ ಹಿನ್ನೆಲೆಯಲ್ಲಿ ಇಂದು ಇಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅದರಲ್ಲೂ ರಾಷ್ಟ್ರಪತಿ ಪಾಲ್ಗೊಂಡು ವೀಕ್ಷಿಸಿದರು.