

ಕೋಲಾರ: ರಾಜ್ಯ ಸರ್ಕಾರವು ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದ್ದು, ಈ ಅವಧಿಯಲ್ಲಿ ಅವರು ಮಾಡಿದ್ದು ಶೂನ್ಯ ಸಾಧನೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ ಮಾಡಿಕೊಳ್ಳಲು ಮುಂದಾಗಿದೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಆರೋಪಿಸಿರು.
ನಗರದ ಪತ್ರಕರ್ತ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ "ದುಬಾರಿ ಜೀವನ ಅಭಿವೃದ್ಧಿ ಶೂನ್ಯ ಕರ್ನಾಟಕ' ಲೂಟಿ- ಕಾಂಗ್ರೆಸ್ ಡ್ಯೂಟಿ' ಕರ ಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಬಿಜೆಪಿ ಜಾರಿಗೆ ತಂದಿದ್ದ ಕಾರ್ಯಕ್ರಮಗಳಿಗೆ ಟೇಪ್ ಕತ್ತರಿಸಿಕೊಂಡಿದ್ದು ಬಿಟ್ಟರೆ ಕಾರ್ಯಕ್ರಮ ಜಾರಿಗೆ ತರಲಿಲ್ಲ. ಗ್ಯಾರಂಟಿಗಳಿಗೆ ದುಡ್ಡು ಕೊಡಲಾಗದೆ ಸಿದ್ದರಾಮಯ್ಯ ಅವರು ರಾಜ್ಯವನ್ನು ಸಾಲಕ್ಕೆ ದೂಡಿದ್ದಾರೆ ಎಂದು ದೂರಿದರು.
ಗ್ಯಾರಂಟಿಗಳಾದ ಗೃಹಲಕ್ಷಿ$್ಮ ಯೋಜನೆಗೆ ಕಳೆದ 4 ತಿಂಗಳಿಂದ ಹಣ ಹಾಕಿಲ್ಲ. ಅನ್ನಭಾಗ್ಯದಲ್ಲಿ ಅಕ್ಕಿಯೂ ಇಲ್ಲ, ಹಣವೂ ಇಲ್ಲ. ಇನ್ನು ನಿರುದ್ಯೋಗಿಗಳಿಗೆ ಯಾವೂದೇ ವೇತನ ನೀಡುತ್ತಿಲ್ಲ ಎಂದು ಕಿಡಿಕಾರಿದರು.
ಪೊಲೀಸ್ ಅಧಿಕಾರಿಗಳ ವರ್ಗಾವಣೆ ದಂಧೆಯ ಕಿರುಕುಳ ಸಹಿಸದೆ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಕಾಸಿಲ್ಲದೆ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ದೂರಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಹಾಲಿನ ದರ 9 ರೂ. ಹೆಚ್ಚಳ ಮಾಡಿದ್ದಾರೆ, ಪ್ರೋತ್ಸಾಹ ಧನ ಕಳೆದ 2 ವರ್ಷಗಳಿಂದ ಬಾಕಿ ಇದೆ. ದಿನಬಳಕೆ ವಸ್ತುಗಳು ನಿರಂತರವಾಗಿ ಬೆಲೆ ಏರಿಕೆಯಾಗಿದೆ. ಬಸ್, ಮೆಟ್ರೋ ಪ್ರಯಾಣದರ ಹೆಚ್ಚಳ, ಬಿತ್ತನೆ ಬೀಜ ದುಬಾರಿಯಾಗಿದೆ ಎಂದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ವಕ್ತಾರ ಎಸ್.ಬಿ.ಮುನಿವೆಂಕಟಪ್ಪ. ಸಂಚಾಲಕರಾದ ಪ್ರವಿಣ್ ಗೌಡ, ಕೆಂಬೋಡಿ ನಾರಾಯಣಸ್ವಾಮಿ, ಮುಖಂಡರಾದ ಮಾಗೇರಿ ನಾರಾಯಣಸ್ವಾಮಿ ಇದ್ದರು.