

ರಾಣೆಬೆನ್ನೂರ: ಮಾನಸಿಕ ಶಾಂತಿ, ನೆಮ್ಮದಿ ಮತ್ತು ಯಡಿಯೂರು ಸಿದ್ದಲಿಂಗ ಶ್ರೀಗಳ ಶರಣರ ದರ್ಶನಕ್ಕೆ ಪಾದಯಾತ್ರೆ ಮಾಡುವ ಪರಂಪರೆ ಮತ್ತು ಸಂಪ್ರದಾಯ ಕಳೆದ 49 ವರ್ಷಗಳಿಂದ ಸಾಗಿ ಬಂದಿದೆ ಎಂದು ಕ್ಷೇತ್ರ ದರ್ಶನ ಸದ್ಭಾವನಾ ಪಾದಯಾತ್ರಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಕಡ್ಲಿ ಹೇಳಿದರು.
ಗುರುವಾರ ನಗರಕ್ಕೆ ಆಗಮಿಸಿದ ಶಲವಡಿ ನವಲಗುಂದದಿಂದ ಹೊರಟ ಸದ್ಭಾವನಾ ಪಾದಯಾತ್ರೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಇತಿಹಾಸದಲ್ಲಿ ಸಾಧು, ಸಂತರು, ಶರಣರು, ತಮ್ಮ ಪುಣ್ಯ ಪ್ರಾಪ್ತಿ ಮತ್ತು ಲೋಕ ಕಲ್ಯಾಣಕ್ಕಾಗಿ ಪಾದಯಾತ್ರೆಯ ಮೂಲಕ ಧರ್ಮ ದೇಗುಲಗಳಿಗೆ ತೆರಳುವ ಪರಂಪರೆ ಇತ್ತು. ಅದೇ ರೀತಿ, ಪ್ರತಿ ವರ್ಷ ಗೌರಿ ಹುಣ್ಣಿಮೆಯ ದಿನದಂದು ಶಲವಡಿಯಿಂದ ನವಲಗುಂದ ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿಯವರು ಸೇರಿ ಇನ್ನಿತರ ಪೂಜ್ಯರ ನೇತೃತ್ವದಲ್ಲಿ ಪಾದಯಾತ್ರೆ ಸಾಗಿದೆ ಎಂದರು.
ಸಮಿತಿಯ ಕಾರ್ಯದಶಿರ್ ಈಶ್ವರ ತೆಗ್ಗಿನಮನಿ, ಶಿವಯೋಗಿ ಅಸುಂಡಿ, ವೀರೇಶ ಅಸುಂಡಿ, ಕುಮಾರ ಜಂಬಿಗಿ, ಬಸಣ್ಣ ಕುರುವತ್ತಿ, ಕೊಟ್ರೇಶಪ್ಪ ಎಮ್ಮಿ, ಜಯಣ್ಣ ಚೆನ್ನಗೌಡ್ರ, ಬಸವರಾಜ ಶೆಟ್ಟರ, ಪರಮೇಶ್ವರಯ್ಯ ಮಠದ ಮತ್ತಿತರರು ಉಪಸ್ಥಿತರಿದ್ದರು.