ನಟ ಅಜಯ್​ ದೇವಗನ್​ ಸಹೋದರ ಅನಿಲ್​ ದೇವಗನ್ ಇನ್ನಿಲ್ಲ..

Anil
Published on

ನವದೆಹಲಿ: ಹಿಂದಿ ಚಿತ್ರನಟ ಅಜಯ್​ ದೇವಗನ್​ ಅವರ ಸಹೋದರ ಅನಿಲ್​ ದೇವಗನ್​ (45) ಸೋಮವಾರ ರಾತ್ರಿ ನಿಧನರಾದರು. ಮಂಗಳವಾರ ಈ ಬಗ್ಗೆ ಸ್ವತಃ ಅಜಯ್​ ದೇವಗನ್ ಮಾಹಿತಿ ನೀಡಿದ್ದಾರೆ.

ನಾನು ನಿನ್ನೆ ರಾತ್ರಿ ನನ್ನ ಸಹೋದರ ಅನಿಲ್​ ದೇವಗನ್​ನನ್ನು ಕಳೆದುಕೊಂಡೆ. ಅವನ ಅಕಾಲಿಕ ಮರಣ ನಮ್ಮ ಕುಟುಂಬಕ್ಕೆ ದುಃಖ ಉಂಟುಮಾಡಿದೆ. ಎಡಿಎಫ್​ಎಫ್​ ಮತ್ತು ನಾನು ಅವನ ಉಪಸ್ಥಿತಿಯನ್ನು ದಿನ ಮಿಸ್​ ಮಾಡಿಕೊಳ್ಳುತ್ತೇನೆ. ಅವನ ಆತ್ಮಕ್ಕೆ ಶಾಂತಿ ಕೋರುತ್ತಿದ್ದೇನೆ ಎಂಬುದಾಗಿ ಅಜಯ್​ ದೇವಗನ್ ಹೇಳಿಕೊಂಡಿದ್ದಾರೆ.

ಅನಿಲ್​ ತನ್ನ ಅಣ್ಣ ಅಜಯ್​ ದೇವಗನ್ ಅವರ 'ರಾಜು ಚಾಚಾ' ಹಾಗೂ 'ಬ್ಲ್ಯಾಕ್​ಮೇಲ್'​ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net