

ಅಹಮದಾಬಾದ್: ಜಗತ್ತಿನ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ಮೊಟೆರೋ ಸ್ಟೇಡಿಯಂನಲ್ಲಿ ಭಾಷಣ ಮಾಡಿದ ಡೊನಾಲ್ಡ್ ಟ್ರಂಪ್ ಅವರು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹಾಗೂ ಇಂಡಿಯನ್ ಕ್ರಿಕೆಟ್ ಟೀಂ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರ ಹೆಸರನ್ನು ಉಲ್ಲೇಖಿಸಿದರು.
ಈ ದೇಶದ ಜನರು ಅಂದಿನ ಸಚಿನ್ ತೆಂಡೂಲ್ಕರ್ನಿಂದ ಹಿಡಿದು ಇಂದಿನ ವಿರಾಟ್ ಕೊಹ್ಲಿಯವವರೆಗೆ, ವಿಶ್ವದ ಎಲ್ಲ ಶ್ರೇಷ್ಠ ಕ್ರಿಕೆಟ್ ಆಟಗಾರರನ್ನೂ ಹುರಿದುಂಬಿಸುತ್ತಾರೆ. ಇದೊಂದು ಒಳ್ಳೆಯ ವಿಚಾರ ಎಂದು ಟ್ರಂಪ್ ಹೇಳಿದರು.
ಅಮೆರಿಕ ಅಧ್ಯಕ್ಷರ ಬಾಯಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಹೆಸರು ಕೇಳುತ್ತಿದ್ದಂತೆ ನೆರೆದಿದ್ದ ಜನರು ದೊಡ್ಡದಾಗಿ ಕೂಗುವ ಮೂಲಕ ಹರ್ಷೋದ್ಘಾರ ಮಾಡಿ, ಚಪ್ಪಾಳೆ ಹೊಡೆದು ಸಂತೋಷ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಮುಗುಳ್ನಕ್ಕರು.
ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಮೊಟೆರಾ ಬಗ್ಗೆ ಮಾತನಾಡುವಾಗ ಸಚಿನ್ ತೆಂಡೂಲ್ಕರ್ ಹಾಗೂ ಕೊಹ್ಲಿ ಹೆಸರನ್ನು ಪ್ರಸ್ತಾಪಿಸಿದರು.