

ಶಿರಸಿ: ಬೆಂಗಳೂರಿನ ಆರ್.ವಿ. ಕಾಲೇಜ್ ಆಫ್ ಇಂಜಿನಿಯರಿಂಗ್ನಲ್ಲಿ ವ್ಯಾಸಂಗ ಮಾಡುತ್ತಿರುವ, ತಾಲೂಕಿನ ಶಿರಸಿಮಕ್ಕಿಯ ಸಚಿನ್ ಜನಾರ್ದನ ಹೆಗಡೆ ಎಂ.ಟೆಕ್ (ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗ) ನಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ಪಡೆದಿದ್ದಾನೆ.
ಇತ್ತೀಚೆಗೆ ಕಾಲೇಜ್ನ ಘಟಿಕೋತ್ಸವದಲ್ಲಿ ಬಂಗಾರದ ಪದಕ, ಪ್ರಶಸ್ತಿ ಪತ್ರ ಪ್ರದಾನ ಮಾಡಲಾಯಿತು. ಭಾರತೀ ಹೆಗಡೆ ಮತ್ತು ಜನಾರ್ದನ ಹೆಗಡೆ ಅವರ ದ್ವಿತೀಯ ಪುತ್ರ.