‘ಏಕ್​ ಲಡಕೀ ಚಾಹಿಯೇ ಖಾಸ್​ ಖಾಸ್...’ ಎಂದು ಬೈಕ್‌ ಮೇಲೆ ಡಾನ್ಸ್‌ ಮಾಡಿ ಭಾರಿ ದಂಡ ಹಾಕಿಸಿಕೊಂಡ ಯುವಕ!

bike1
Published on

ಕಾನ್ಪುರ (ಉತ್ತರ ಪ್ರದೇಶ): ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಮಂದಿಯನ್ನು ಫಾಲೋವರ್ಸ್‌ ಪಡೆಯಬೇಕು, ಹೆಚ್ಚು ಮಂದಿ ತಮ್ಮನ್ನು ಇಷ್ಟಪಡಬೇಕು, ತಮ್ಮ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಬೇಕು, ತಮ್ಮನ್ನು ಎಲ್ಲರೂ ಹೊಗಳಬೇಕು ಎಂದು ಅಂದುಕೊಳ್ಳುವ ಯುವಜನರೇ ಹೆಚ್ಚು. ಅದರಲ್ಲಿಯೂ ಯುವಕರಾಗಿದ್ದರಂತೂ ಮುಗಿದೇ ಹೋಯ್ತು. ಯುವತಿಯರನ್ನು ಆಕರ್ಷಿಸಲು ಅವರು ಮಾಡುವ ಸಾಹಸ ಕಾರ್ಯಗಳು ಅಷ್ಟಿಷ್ಟಲ್ಲ. ಇವರಿಗೆ ಕೆಲವು ಚಿತ್ರಗಳಲ್ಲಿನ ನಾಯಕರೂ ಪ್ರೇರಣೆ ಆಗುತ್ತಿದ್ದಾರೆ ಎನ್ನುವುದು ವಿಪರ್ಯಾಸವೇ ಸರಿ.

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಫಾಲೋವರ್ಸ್‌ ಅನ್ನು ಪಡೆದುಕೊಳ್ಳಲು ಸರ್ಕಸ್‌ ಮಾಡಲು ಹೋದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಭಾರಿ ಮೊತ್ತದ ದಂಡ ಕಟ್ಟುವಂತಾಗಿದೆ. ಬೈಕ್‌ನಲ್ಲಿ ಸ್ಟಂಟ್‌ ಮಾಡಲು ಹೋಗಿರುವ ಈ ಯುವಕನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಇದೇ ರೀತಿ ಸರ್ಕಸ್‌ ಮಾಡಲು ಹೋಗಿ ಹಲವರು ಜೀವ ಕಳೆದುಕೊಂಡಿದ್ದರೂ ಈ ಸ್ಟಂಟ್‌ ಹುಚ್ಚು ಯುವಕರನ್ನು ಬಿಡುತ್ತಿಲ್ಲ.

ಬಾಲಿವುಡ್​ ಸಿನಿಮಾಗಳಲ್ಲಿ ತೋರಿಸುವಂತೆ ಸ್ಟಂಟ್ ಮಾಡಲು ಪ್ರಯತ್ನ ಪಡುತ್ತಿದ್ದೆ. ನನ್ನನ್ನು ಕ್ಷಮಿಸಿ ಎಂದು ಈ ಯುವಕ ಪೊಲೀಸರಲ್ಲಿ ಕೇಳಿಕೊಂಡಿದ್ದಾನೆ. ಹೆಲ್ಮೆಟ್‌ ಕೂಡ ಧರಿಸದೇ ಬೈಕ್​ ಮೇಲೆ ನಿಂತು ಡ್ಯಾನ್ಸ್​ ಮಾಡುತ್ತಿದ್ದ ಈತನಿಗೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ಈ ಯುವಕನನ್ನು ಖಲೀದ್​ ಅಹ್ಮದ್​ ಎಂದು ಗುರುತಿಸಲಾಗಿದ್ದು, ನಟ ಗೋವಿಂದ್ ಅಭಿನಯದ ‘ಏಕ್​ ಲಡಕೀ ಚಾಹಿಯೇ ಖಾಸ್​ ಖಾಸ್​’ ಹಾಡಿಗೆ ಮೋಟಾರ್ ಸೈಕಲ್​ ಮೇಲೆ ನಿಂತು ನೃತ್ಯ ಮಾಡುತ್ತಿರುವಂತೆ ನರ್ತಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಈತನ ಹಿಸ್ಟರಿ ನೋಡಿದಾಗ ಹಲವಾರು ಟ್ರಾಫಿಕ್‌ ರೂಲ್ಸ್‌ಗಳನ್ನು ಈತ ಉಲ್ಲಂಘನೆ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಈ ಭಾರಿ ಮೊತ್ತದ ದಂಡ ವಿಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net