11ನೇ ಮದ್ವೆಯಾಗಲು ಈಕೆಗೆ ಗಂಡು ಬೇಕಂತೆ! ಜೀವನದಲ್ಲಿ ಥ್ರಿಲ್‌ ಬೇಕು ಅನ್ನೋ ಈಕೆ ಕೊಟ್ಟ ಕಾರಣ ಕೇಳಿ...

marriage
Published on

ನ್ಯೂಯಾರ್ಕ್‌: ಈ ಚಿತ್ರದಲ್ಲಿ ಮಕ್ಕಳ ಜತೆ ಇರುವಾಕೆಯ ಹೆಸರು ಮಾನೆಟ್‌. ಅಮೆರಿಕದ ಈ ಮಹಿಳೆಗೆ ಈಗ 52 ವರ್ಷ. ಇದಾಗಲೇ 10 ಮದುವೆಯಾಗಿರೋ ಈಕೆಯೀಗ 11ನೇ ಗಂಡಿಗಾಗಿ ಕಾಯುತ್ತಿದ್ದಾಳೆ!

ಹುಡುಗರಿಗೆ ಹುಡುಗಿ ಸಿಕ್ತಿಲ್ಲ, ಹುಡುಗಿಯರಿಗೆ ಹುಡುಗ ಸಿಕ್ತಿಲ್ಲ ಎಂದು ಭಾರತದಲ್ಲಿ ಗೋಳಾಡುತ್ತಿರುವ ವೇಳೆ, ಈ ಸುಂದರಿಗೆ ಇದಾಗಲೇ 10 ಸಲ ಮದ್ವೆಯಾಗಿದ್ದು, (ಕೆಲವೊಬ್ಬರನ್ನು ಎರಡೆರಡು ಸಲ ಮದುವೆಯಾಗಿದ್ದಾಳೆ) ಈಗ 11ನೇ ಮದುವೆಗಾಗಿ ಕಾಯುತ್ತಿದ್ದಾಳೆ! ಏಕೆಂದರೆ ಇದು ಇವಳ ಹವ್ಯಾಸವಂತೆ.

ತನ್ನ ಮದುವೆ ಬಗ್ಗೆ ಮಾನೆಟ್‌ ಹೇಳಿದ್ದು ಹೀಗಿದೆ ನೋಡಿ:

’ನನಗೆ ಚಿಕ್ಕಂದಿನಿಂದಲೂ ಹುಡುಗರು ಎಂದರೆ ತುಂಬಾ ಇಷ್ಟ. ನನ್ನ ಅಣ್ಣನ ಸ್ನೇಹಿತರು ನಮ್ಮ ಮನೆಗೆ ಬರುತ್ತಿದ್ದರು. ಅವರ ಜತೆ ತುಂಬಾ ಸಲುಗೆಯಿಂದ ಇದ್ದೆ. ಅವರಲ್ಲಿ ಕೆಲವರ ಮೇಲೆ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಲವ್‌ ಶುರುವಾಗಿತ್ತು. ಹಾಗೂ ಹೀಗೂ ಕಂಟ್ರೋಲ್‌ ಮಾಡಿಕೊಂಡೆ. ನಂತರ ಹೈಸ್ಕೂಲ್‌ಗೆ ಬಂದ ಮೇಲೆ ಮೊದಲ ಬಾರಿಗೆ ನನ್ನ ಮದುವೆಯಾಯಿತು. ಅದು ನನಗೆ ತುಂಬಾ ಇಷ್ಟವಾಗಿ ಹೋಯಿತು. ಅದಕ್ಕಾಗಿ ಅಲ್ಲಿಂದಲೇ ಮದುವೆ ಗೀಳು ಶುರುವಾಯ್ತು’ ಎಂದಿದ್ದಾಳೆ.

‘ಆದರೆ ನನ್ನ ಮೊದಲ ಮದುವೆ ಸಕ್ಸಸ್‌ ಆಗಲಿಲ್ಲ. ಏಕೆಂದರೆ ಸ್ವಲ್ಪ ವರ್ಷದಲ್ಲಿಯೇ ಅವನ ಬಗ್ಗೆ ನಾನು ಆಸಕ್ತಿ ಕಳೆದುಕೊಂಡೆ. ಅದಕ್ಕೆ ಅವನಿಗೆ ಡಿವೋರ್ಸ್‌ ಕೊಟ್ಟುಬಿಟ್ಟೆ. ನಂತರ ಇನ್ನೊಬ್ಬನನ್ನು ಮದುವೆಯಾದೆ. ಅದು ಕೂಡ ಹಾಗೇ ಆಯಿತು. ಅದಕ್ಕಾಗಿಯೇ ಮದುವೆ ಮಾಡಿಕೊಳ್ಳುವುದೇ ಒಂದು ಥರ ಥ್ರಿಲ್ ಕೊಡುತ್ತದೆ. ಪದೇ ಪದೇ ಮದುವೆ ಬ್ರೇಕಪ್ ಆಗುತ್ತಿದೆ. ಇದಕ್ಕೆ ನನಗೆ ಬೇಸರವೇ ಇಲ್ಲ’ ಎಂದು ಅನಿಸಿಕೆ ಹಂಚಿಕೊಂಡಿದ್ದಾಳೆ.

ಇದಾಗಲೇ 10 ಮದುವೆಯಾಗಿದ್ದೇನೆ. ಹಾಗೆ ನೋಡುವುದಾದರೆ ನನಗೆ ಸಿಕ್ಕ ಗಂಡಂದಿರೆಲ್ಲಾ ಒಳ್ಳೆಯವರೇ, ತುಂಬಾ ಪ್ರೀತಿ ಮಾಡುತ್ತಿದ್ದರು. ಆದರೂ ನನಗೆ ಯಾಕೋ ತುಂಬಾ ವರ್ಷ ಒಬ್ಬನ ಜತೆ ಇರಲು ಬೋರ್‌ ಆಯಿತು. ಒಂದಿಬ್ಬರನ್ನು ಎರಡೆರಡು ಬಾರಿಯೂ ಮದುವೆಯಾಗಿದ್ದೇನೆ. ನಂತರ ಪುನಃ ಬ್ರೇಕ್‌ ಅಪ್‌ ಆಗುತ್ತಾ ಹೋಯಿತು ಎಂದಿರುವ ಬಾನೆಟ್‌, ಇದೀಗ 10ನೇ ಗಂಡನಿಗೆ ಡಿವೋರ್ಸ್‌ ಕೊಟ್ಟಿದ್ದಾಳೆ. ಸದ್ಯ 57 ವರ್ಷದ ಜಾನ್ ಎಂಬಾತನ ಜತೆ ಎರಡು ವರ್ಷಗಳಿಂದ ಡೇಟಿಂಗ್‌ ಮಾಡುತ್ತಿದ್ದಾರೆ. ಈತ ಈಕೆಯ ಮಾಜಿ ಪತಿ ಕೂಡ! ಆದರೆ ಪುನಃ ಇವನ ಜತೆಯೇ ಮದುವೆಯಾಗಲು ಇಚ್ಛಿಸದ ಬಾನೆಟ್‌ 11ನೇ ಪತಿಯ ಹುಡುಕಾಟದಲ್ಲಿ ಇದ್ದಾಳೆ. ಈ ಮದುವೆಗಳಿಂದ ಈಕೆಗೆ ಕೆಲವು ಮಕ್ಕಳೂ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net