ಎರಡು ತಿಂಗಳ ಕಂದನಿಗೆ ಎದೆಹಾಲು ಕುಡಿಸುತ್ತಲೇ ಪ್ರಾಣಬಿಟ್ಟ ಅಮ್ಮ: ಹೃದಯಾಘಾತದಿಂದ ಸಾವು

mother
Published on

ತಿಮ್ಮರಾಜ ಮಂಡಲ್ (ತೆಲಂಗಾಣ): ಮಗುವಿಗೆ ಎದೆಹಾಲು ಕುಡಿಸುತ್ತಿರುವಾಗಲೇ ಹೃದಯಾಘಾತವಾಗಿ ತಾಯಿ ಮೃತಪಟ್ಟಿರುವ ದಾರುಣ ಘಟನೆ ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ತಿಮ್ಮರಾಜ ಮಂಡಲ್ ನ ನೆರೆಲ್ಲಪಲ್ಲಿಯಲ್ಲಿ ನಡೆದಿದೆ.

ರಾಜಾಪುರ ಮಂಡಲದ 25 ವರ್ಷ ಜಯಶ್ರೀ ಜೀವ ಕಳೆದುಕೊಂಡವರು. ಇವರು ಚೊಚ್ಚಲ ಹೆರಿಗೆಗಾಗಿ ಎರಡು ತಿಂಗಳಾಗಿತ್ತು. ಅವರಿಗೆ ಸ್ವಲ್ಪ ಅನಾರೋಗ್ಯ ಕಾಣಿಸಿಕೊಂಡಿತ್ತು. ಅವರ ಗಂಡ ಪ್ರಶಾಂತ್​ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಇದೇನು ದೊಡ್ಡ ಸಮಸ್ಯೆಯಲ್ಲ, ಹೃದಯನಾಳದಲ್ಲಿ ಸ್ವಲ್ಪ ಸಮಸ್ಯೆ ಇದೆ, ಇದು ದೊಡ್ಡ ವಿಷಯವಲ್ಲ, ಗುಣವಾಗುತ್ತದೆ ಎಂದು ಹೇಳಿದ್ದ ವೈದ್ಯರು ಔಷಧ ಕೊಟ್ಟು ಕಳುಹಿಸಿದ್ದರು.

ಈ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ವಾಪಸ್​ ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಬೆಳಗಿನ ಜಾವ ಮಗುವಿಗೆ ಎದೆಹಾಲು ಕುಡಿಸುತ್ತಿರುವಾಗಲೇ ಹೃದಯಾಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚಹ ಕುಡಿಯಲು ಅವರ ಅಜ್ಜಿ ಕರೆದರೂ ಜಯಶ್ರೀ ಉತ್ತರಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದು ನೋಡಿದಾಗಲೇ ವಿಷಯ ತಿಳಿದುಬಂದಿದೆ. ಏನೂ ಅರಿಯದ ಎರಡು ತಿಂಗಳ ಹೆಣ್ಣು ಮಗು ತಾಯಿಯ ಮಡಿಲಿನಲ್ಲಿ ಹಾಲನ್ನು ಹೀರುತ್ತಾ ಇದ್ದ ದೃಶ್ಯ ಮನಕಲಕುವಂತಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net