ಮದ್ಯದ ಬಾಟಲಿ ಒಯ್ಯುತ್ತಿದ್ದ ಲಾರಿ ಪಲ್ಟಿ: ನಿದ್ದೆಯ ಮಂಪರಿನಲ್ಲಿ ಅನಾಹುತ- ರಸ್ತೆಯ ತುಂಬ ಹೆಂಡದ ಹೊಳೆ

lorry
Published on

ವಿಜಯನಗರ: ವಿವಿಧ ರೀತಿಯ ಮದ್ಯದ ಬಾಟಲಿಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿ ಹೊಡೆದ ಪರಿಣಾಮವಾಗಿ ರಸ್ತೆಯ ತುಂಬೆಲ್ಲಾ ಮದ್ಯದ ಹೊಳೆ ಹರಿದಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ತಿಮ್ಮಲಾಪುರದ ರಾ.ಹೆ.50 ರ ಫ್ಲೈ ಓವರ್ ಮೇಲೆ ನಡೆದಿದೆ.

ಇದರಲ್ಲಿ ವಿವಿಧ ಕಂಪೆನಿಗಳ ಮದ್ಯಗಳು ಇದ್ದವು. ಈ ಮದ್ಯದ ಬಾಟಲಿಗಳನ್ನು ಬೆಂಗಳೂರಿನಿಂದ ಬೀದರ್‌ಗೆ ಒಯ್ಯಲಾಗುತ್ತಿತ್ತು.

ನಿದ್ದೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿದ್ದ ಹಿನ್ನೆಲೆಯಲ್ಲಿ ಲಾರಿ ಪಲ್ಟಿ ಹೊಡೆದಿದೆ. ಸ್ಥಳಕ್ಕೆ ಮರಿಯಮ್ಮನ ಹಳ್ಳಿ ಪೊಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net