

ಸಾಮಾನ್ಯವಾಗಿ ಎಲ್ಲ ಮನುಷ್ಯರನ್ನು ದೇವರು ಒಂದೇ ತೆರನಾಗಿ ಸೃಷ್ಟಿ ಮಾಡಿದ್ದರೂ ಕೆಲವೊಂದು ಜನರಲ್ಲಿ ಒಂದು ಸ್ವಲ್ಪ ವ್ಯತ್ಯಾಸಗಳು ಇರುತ್ತವೆ. ಎರಡು ಕೈ, ಎರಡು ಕಾಲು, ಎರಡು ಕಣ್ಣು, ಒಂದೇ ಮೂಗು, ಬಾಯಿ ಎಲ್ಲವೂ ಮನುಷ್ಯನಿಗೆ ಸಹಜವಾಗಿದ್ದರೂ ಕೆಲವೊಮ್ಮೆ ಅಪರೂಪದ ಎಂಬಂತೆ ಇದರಲ್ಲಿ ವ್ಯತ್ಯಾಸಗಳು ಆಗುತ್ತವೆ.
ಮನುಷ್ಯರು ಎಲ್ಲರೂ ಒಂದೇ ರೀತಿ ಇದ್ದರೂ, ಒಬ್ಬೊಬ್ಬರಲ್ಲಿಯೂ ಒಂದೊಂದು ತೆರನಾದ ವ್ಯತ್ಯಾಸ ಇದ್ದೇ ಇರುತ್ತದೆ. ಅದಕ್ಕಾಗಿಯೇ ಕೋಟ್ಯಂತರ ಮಂದಿಯೂ ಒಬ್ಬರಂತೆ ಒಬ್ಬರು ಇರುವುದಿಲ್ಲ. ನೋಡಲು ಒಂದೇ ರೀತಿ ಎನ್ನಿಸಿದರೂ ಅಲ್ಪಸ್ವಲ್ಪ ವ್ಯತ್ಯಾಸ ಇದ್ದೇ ಇರುತ್ತದೆ.
ಅವಳಿ- ಜವಳಿಯಾಗಿದ್ದರೂ, ಒಂದು ಕ್ಷಣ ನೋಡಿದಾಗ ಥೇಟ್ ಒಂದೇ ರೀತಿ ಇದ್ದು, ಅವರ್ಯಾರು, ಇವರ್ಯಾರು ಎಂದು ಗೊತ್ತಾಗದಿದ್ದರೂ ಸೂಕ್ಷ್ಮವಾಗಿ ಗಮನಿಸಿದಾಗ ಅವರಲ್ಲಿಯೂ ವ್ಯತ್ಯಾಸ ಇದ್ದೇ ಇರುತ್ತದೆ. ಅದಕ್ಕೇ ಅಲ್ಲವೇ? ಪ್ರತಿಯೊಬ್ಬರನ್ನೂ ಗುರುತಿಸಲು ಸಾಧ್ಯವಾಗುವುದು.
ಅದೇನೆ ಇರಲಿ. ಸದ್ಯ ಈಗ ಈ ಹುಡುಗಿಯ ವಿಷಯಕ್ಕೆ ಬರೋಣ. ಈ ಚಿತ್ರದಲ್ಲಿರುವ ಹುಡುಗಿಯನ್ನು ಸೂಕ್ಷ್ಮವಾಗಿ ಗಮನಿಸಿ. ಏನಾದರೊಂದು ವಿಶೇಷತೆ ಕಾಣಿಸುತ್ತದೆಯಾ ನೋಡಿ... ತನ್ನ ಮಾದಕ ಕಣ್ಣುಗಳಿಂದ ದೃಷ್ಟಿ ಬೀರುತ್ತಾ ಇರುವ ಈ ಬೆಡಗಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದು ವಿಶೇಷತೆ ಕಾಣಿಸುತ್ತದೆ. ಏನೆಂದು ಹೇಳಬಲ್ಲಿರಾ?