

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನಡೆದ ಎಂಟು ಹಂತದಲ್ಲಿ ಮತದಾನ ನಡೆಯಲಿದ್ದು, ಇಂದು ಅದರ ಅಂತಿಮ ದಿನವಾಗಿದೆ. 35 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿದ್ದ ಮತದಾನದ ವೇಳೆ ಮತಗಟ್ಟೆ ಸಮೀಪ ಬಾಂಬ್ ಕಾಣಿಸಿಕೊಂಡಿದ್ದು, ಮತದಾರರನ್ನು ಬೆಚ್ಚಿಬೀಳಿಸಿದ ಘಟನೆ ನಡೆದಿದೆ.
ಉತ್ತರ ಕೋಲ್ಕತಾದ ಮಹಾಜತಿ ಸದನ್ ಆಡಿಟೋರಿಯಂ ಸಮೀಪ ಬಾಂಬ್ ಕಂಡಬಂತು. ಯಾರೋ ಬಾಂಬ್ ಎಸೆದು ಹೋಗಿದ್ದರು. ಕೂಡಲೇ ಬಾಂಬ್ ನಿಷ್ಕ್ರೀಯ ದಳ ಸ್ಥಳಕ್ಕೆ ಆಗಮಿಸಿ ಜನತೆಯ ಆತಂಕವನ್ನು ದೂರ ಮಾಡಿದೆ. ಬಾಂಬ್ ಇಟ್ಟವರು ಯಾರ ಎಂಬ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಜನರು ಚುರುಕಿನಿಂದ ಮತದಾನ ಮಾಡುತ್ತಿರುವುದು ಕಂಡುಬರುತ್ತಿದೆ.
ಬಿರ್ಬಿಮ್ ಜಿಲ್ಲೆಯ ಮತಗಟ್ಟೆ ಸಂಖ್ಯೆ 188ರಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದು ಮತದಾನ ಅರ್ಧಗಂಟೆ ತಡವಾಗಿ ಆರಂಭವಾಗಿದೆ. ಬೆಳಿಗ್ಗೆ 9.30ರ ಹೊತ್ತಿಗೆ ಶೇ.16ರಷ್ಟು ಮತದಾನವಾಗಿದೆ.
ಮುಕ್ತ ಮತ್ತು ನ್ಯಾಯಯುತ ಮತದಾನಕ್ಕಾಗಿ ಚುನಾವಣಾ ಆಯೋಗ ಕೇಂದ್ರ ಪಡೆಗಳ 641 ತುಕಡಿಗಳನ್ನು ನಿಯೋಜಿಸಿದೆ.