VIDEO: ಮದುವೆಯ ಬೃಹದಾಕಾರದ ಕೇಕ್‌ ಕತ್ತರಿಸೋ ಮೊದಲೇ ಬಿದ್ದು ಚೆಲ್ಲಾಪಿಲ್ಲಿ! ಸಪ್ಲೈಯರ್‌ ಮಾಡಿದ್ದೇನು ನೋಡಿ...

bride
Published on

ನ್ಯೂಯಾರ್ಕ್‌: ಕ್ರೈಸ್ತ ಸಮುದಾಯದಲ್ಲಿನ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಕೇಕ್‌ ಕತ್ತರಿಸುವುದು ಕಡ್ಡಾಯ. ಅದರಲ್ಲಿಯೂ ಮದುವೆಯ ದಿನ ಇದೊಂದು ಧಾರ್ಮಿಕ ಕಾರ್ಯದಂತೆ ನೆರವೇರಿಸಲಾಗುತ್ತದೆ. ಆದ್ದರಿಂದಲೇ ಮದುಮಕ್ಕಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಈ ಕೇಕ್‌ ಶೃಂಗಾರಗೊಳಿಸುತ್ತಾರೆ, ಅಂತಸ್ತಿಗೆ ತಕ್ಕಂತೆ ದುಬಾರಿ ಬೆಲೆ ಬಾಳುವ ಕೇಕ್‌ ರೆಡಿಯಾಗುತ್ತದೆ.

ಅದರಂತೆಯೇ ಅಮೆರಿಕದ ಕ್ರೈಸ್ತ ಜೋಡಿ ತಮ್ಮ ಮದುವೆಗೆ ತಯಾರು ಮಾಡಿಟ್ಟ ಕೇಕ್‌ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಇದಕ್ಕೆ ಕಾರಣ, ಇದೇನು ದುಬಾರಿ ಕೇಕ್‌ ಎಂದೇನಲ್ಲ. ಬದಲಿಗೆ ಅಲ್ಲಿ ಆಗಿರುವ ಘಟನೆಯಿಂದ.

ಅಷ್ಟಕ್ಕೂ ಆಗಿದ್ದೇನೆಂದರೆ, ವಧು-ವರರು ತಮ್ಮ ಮದುವೆಗೆಂದು ಭಾರಿ ಗಾತ್ರದ ಕೇಕ್‌ ರೆಡಿ ಮಾಡಿಸಿದ್ದಾರೆ. ಅದ್ಧೂರಿಯಾಗಿ ಶೃಂಗಾರಗೊಂಡಿರುವ ಸಭೆಯಲ್ಲಿ ನೆಂಟರಿಷ್ಟರೆಲ್ಲಾ ಸೇರಿರುವಾಗ ಆ ಕೇಕ್‌ ಅನ್ನು ಕಟ್‌ ಮಾಡುವುದಕ್ಕಾಗಿ ಸಪ್ಲೈಯ್‌ ವಧು-ವರರ ಬಳಿ ಅದನ್ನು ತರುತ್ತಿದ್ದಾನೆ.ಅಷ್ಟರಲ್ಲಿಯೇ ಅದು ಜಾರಿ ನೆಲದ ಮೇಲೆ ಬಿದ್ದು ಚೆಲ್ಲಾಪಿಲ್ಲಿಯಾಗುತ್ತದೆ.

ಇದನ್ನು ಅಲ್ಲಿದ್ದವರೆಲ್ಲಾ ನೋಡಿ ಶಾಕ್‌ ಆಗುತ್ತಾರೆ. ಆದರೆ ಸಪ್ಲೈಯರ್‌ ಮಾತ್ರ ನಗುತ್ತಾನೆ. ಏಕೆಂದರೆ ಆತ ಇದನ್ನು ಮಾಡಿದ್ದು ತಮಾಷೆಗಾಗಿ. ಅಸಲಿಗೆ ಇದು ನಕಲಿ ಕೇಕ್‌, ಅಸಲಿ ಕೇಕ್‌ ಹಿಂದುಗಡೆಯಿಂದ ಮತ್ತೊಬ್ಬ ಸಪ್ಲೈಯರ್‌ ತಂದಾಗ ಎಲ್ಲರ ಮೊಗದಲ್ಲಿಯೂ ನಗುವಿನ ಅಲೆ.

ಈ ವಿಡಿಯೋ ಇನ್ಸ್‌ಟಾಗ್ರಾಮ್‌ನಲ್ಲಿ ಶೇರ್‌ ಆಗಿದ್ದು ಜನರು ಥಹರೇವಾರಿ ಕಮೆಂಟ್‌ ನೀಡುತ್ತಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net