ಯಪ್ಪೋ ಬ್ಯಾಡಪ್ಪೋ, ನನಗೆ ಸೂಜಿ ಬೇಡ- ವಿಜಯನಗರದ ಮಹಿಳೆ ಗೋಳಾಟ, ಸಿಬ್ಬಂದಿ ಸುಸ್ತು

vijayapura
Published on

ವಿಜಯನಗರ: ಎಲ್ಲರಿಗೂ ಕರೊನಾ ಲಸಿಕೆ ನೀಡಲು ಆರೋಗ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದರೆ ಕೆಲವೆಡೆ ಲಸಿಕೆ ಕುರಿತಂತೆ ಇದುವರೆಗೆ ಹೆದರಿಕೆ ಇದ್ದು, ಇದನ್ನು ಪಡೆಯಲು ಹಿಂಜರಿಕೆ ಆಗುತ್ತಿರುವ ಘಟನೆಗಳು ನಡೆಯುತ್ತಿವೆ.

ಇಂಥದ್ದೇ ಘಟನೆ ವಿಜಯನಗರದಲ್ಲಿ ನಡೆದಿದೆ. ನಾ ಇಂಜೆಕ್ಷನ್ ತಗೋಳಲ್ಲಾ ಅಂತ ಮಹಿಳೆಯೊಬ್ಬರು ಗೋಳಾಡಿದ್ದಾರೆ. ಯಪ್ಪೋ ಬ್ಯಾಡಪ್ಪೋ, ನನಗೆ ಸೂಜಿ ಬೇಡ ಅಂತ ಗೋಳಾಡಿದ್ದು, ಇದರ ವಿಡಿಯೋ ವೈರಲ್‌ ಆಗಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ನನಗೆ ಲಸಿಕೆ ಬೇಡ ಅಂತ ಪರ್ವೀನ್‌ ಎಂಬ 50 ವರ್ಷದ ಮಹಿಳೆ ಗೋಳಾಡಿದ್ದಾರೆ. ಸಣ್ಣ ಮಗುವಿಗೆ ಮನವೊಲಿಸುವಂತೆ, ಮಹಿಳೆಯ ಮನವೊಲಿಸಿ, ಕೊನೆಗೂ ಲಸಿಕೆ ನೀಡುವಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಇದರ ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net