VIDEO: ಆಹಾ! 'ವರುಣ', ಏನು ನಿನ್ನಯ ಲೀಲೆ... ನೌಕಾಪಡೆಗೆ ಸೇರ್ಪಡೆಯಾಗಲು ರೆಡಿಯಾದ ಡ್ರೋನ್​...

1362885
Published on

ನವದೆಹಲಿ: ಡ್ರೋನ್​ ಕಂಡುಹಿಡಿದು ಬಹಳ ವರ್ಷಗಳೇ ಕಳೆದಿವೆ. ಇದರ ಬಳಕೆಯನ್ನು ಈಗಾಲೇ ಹಲವು ಕಡೆಗಳಲ್ಲಿ ನಡೆಸಲಾಗುತ್ತಿದೆ. ಆದರೆ ಭಾರತದಲ್ಲಿ ಇಲ್ಲಿಯವರೆಗೆ ಬಳಕೆಯಾಗುತ್ತಿದ್ದ ಡ್ರೋನ್​ಗಳಲ್ಲಿ ಮನುಷ್ಯನ ಹಾರಾಟ ನಡೆದಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ದೇಶದಲ್ಲಿಯೇ ಪ್ರಥಮ ಬಾರಿಗೆ ಮನುಷ್ಯನನ್ನೂ ಕೊಂಡೊಯ್ಯುವ ಡ್ರೋನ್​ ರಚಿಸಲಾಗಿದ್ದು, ಶೀಘ್ರದಲ್ಲಿಯೇ ಇದು ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ.

ಈ ಡ್ರೋನ್ ಹೆಸರು 'ವರುಣ. ಈ ಡ್ರೋನ್‌ ಅನ್ನು ಸ್ಥಳೀಯ ಸ್ಟಾರ್ಟ್​ಅಪ್​ 'ಸಾಗರ್ ಡಿಫೆನ್ಸ್ ಇಂಜಿನಿಯರಿಂಗ್​ ಪ್ರೈವೇಟ್​ ಲಿಮಿಟೆಡ್​' ಕಂಪೆನಿ ತಯಾರಿಸಿದೆ. ಇದು 25 ನಿಮಿಷಗಳಲ್ಲಿ 25 ಕಿ.ಮೀ ಹಾರುವ ಜತೆಗೆ 130 ಕೆ.ಜಿ ತೂಕದ ಸರಕುಗಳನ್ನು ಅಥವಾ ಮನುಷ್ಯರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದೆ.

ಭಾರತೀಯ ನೌಕಾಪಡೆಯು ಈ ಡ್ರೋನ್​ ಅನ್ನು ಒಂದು ಹಡಗಿನಿಂದ ಇನ್ನೊಂದು ಹಡಗಿಗೆ ಸರಕುಗಳನ್ನು ಸಾಗಿಸಲು ಬಳಸಲು ಯೋಜನೆ ರೂಪಿಸಿದೆ. ಸಂಪೂರ್ಣ ಪರೀಕ್ಷೆಯ ನಂತರ ಭಾರತೀಯ ನೌಕಾಪಡೆಯು ಯುದ್ಧದಲ್ಲಿ ಮೊದಲ ಬಾರಿಗೆ ಯುದ್ಧನೌಕೆಗಳಲ್ಲಿ ಇದನ್ನು ಬಳಸುತ್ತಿದೆ. ರಿಮೋಟ್ ಸಹಾಯದಿಂದ ಇದು ಕಾರ್ಯನಿರ್ವಹಿಸಲಿದೆ.

ಸಾಗರ್ ಡಿಫೆನ್ಸ್ ಇಂಜಿನಿಯರಿಂಗ್‌ನ ಸಂಸ್ಥಾಪಕ ಕ್ಯಾಪ್ಟನ್ ನಿಕುಂಜ್ ಪರಾಶರ್ ಅವರು ಇಬ್ಬರು ಸಹ-ಸಂಸ್ಥಾಪಕರಾದ ಬಬ್ಬರ್ ಮತ್ತು ಲಕ್ಷಯ್ ಡ್ಯಾಂಗ್ ಅವರೊಂದಿಗೆ ಭಾರತೀಯ ನೌಕಾಪಡೆಗಾಗಿ ಈ ಡ್ರೋನ್ ವಿನ್ಯಾಸಗೊಳಿಸಿದ್ದಾರೆ. 'ಈ ಡ್ರೋನ್‌ನ ಮುಖ್ಯ ಉದ್ದೇಶ ಯುದ್ಧಭೂಮಿಯಲ್ಲಿ ಮುಂಚೂಣಿಯಲ್ಲಿರುವ ಯೋಧರನ್ನು ರಕ್ಷಿಸಲು ಮತ್ತು ರಾಷ್ಟ್ರದ ಕಣ್ಗಾವಲು ಮತ್ತು ಭದ್ರತೆಯನ್ನು ಬಲಪಡಿಸುವುದು' ಎಂದು ನಿಕುಂಜ್​ ವಿವರಿಸಿದ್ದಾರೆ.

'ಎಲ್ಲಾ ಪ್ರಯೋಗಗಳನ್ನು ಪೂರ್ಣಗೊಳಿಸಿದ ನಂತರ ಅದನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿದೆ. ನೌಕಾಪಡೆಯು ಸಮುದ್ರದಲ್ಲಿ ಒಂದು ಹಡಗಿನಿಂದ ಇನ್ನೊಂದಕ್ಕೆ ಸರಕುಗಳನ್ನು ಕಳುಹಿಸುವ ಮೂಲಕ ಪ್ರಯೋಗ ಮಾಡಲಾಗುತ್ತಿದೆ. ಈ ಡ್ರೋನ್‌ನಲ್ಲಿ ಸರಕುಗಳನ್ನು ವಿತರಿಸಲಾಗುವ ಪ್ರಯೋಗಗಳು ಕೂಡ ಯಶಸ್ವಿಯಾಗಿದೆ. ಇದರ ಸಹಾಯದಿಂದ ಭಾರತೀಯ ನೌಕಾಪಡೆಯು ಹೆಚ್ಚು ಪ್ರಯೋಜನ ಪಡೆದುಕೊಳ್ಳಲಿದೆ' ಎಂದು ಅವರು ಹೇಳಿದರು.

ಡ್ರೋನ್ ವರುಣ ಒಳಗಡೆ ನಾಲ್ವರು ಆಟೋ ಪೈಲಟ್‌ಗಳಿದ್ದಾರೆ. ಇದರ ಟೇಕ್-ಆಫ್ ಸಮಯ 25 ರಿಂದ 33 ನಿಮಿಷಗಳು. ಇದು 130 ಕೆ.ಜಿಯಷ್ಟು ಲಗೇಜ್ ಅಥವಾ ಜನರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಬಹುದು. ನೆಲದಿಂದ ಎರಡು ಮೀಟರ್ ಎತ್ತರಕ್ಕೆ ಹಾರುತ್ತದೆ. ಇದಕ್ಕೆ ಪೈಲಟ್ ಅಗತ್ಯವಿಲ್ಲ, ತಾಂತ್ರಿಕತೆ ಸಹಾಯದಿಂದ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಬಹುದು. ತುರ್ತು ಆರೋಗ್ಯ ಪರಿಸ್ಥಿತಿಯನ್ನು ಈ ಡ್ರೋನ್‌ನ ಮೂಲಕ ಸಾಧಿಸಬಹುದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಇದಕ್ಕೆ ಇತ್ತೀಚೆಗೆ ಚಾಲನೆ ನೀಡಿದ್ದರು. (ಏಜೆನ್ಸೀಸ್​)

ಇಲ್ಲಿದೆ ನೋಡಿ ವಿಡಿಯೋ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net