ವೈಕುಂಠ ಏಕಾದಶಿಗೆ ತಿರುಮಲ ವೆಂಕಟೇಶ್ವರನಿಗೆ ಬಂಪರ್‌! ಎರಡು ಕೋಟಿ ರೂ. ನೀಡಿದ ಭಾರತ್ ಬಯೋಟೆಕ್

biotech
Published on

ತಿರುಪತಿ: ವೈಕುಂಠ ಏಕಾದಶಿಯ ನಿಮಿತ್ತ ಹಲವಾರು ದೇಗುಲಗಳಲ್ಲಿ ಇಂದು ಪೂಜೆ, ಪುನಸ್ಕಾರಗಳು ನೆರವೇರುತ್ತಿವೆ. ಭಕ್ತರು ತಮ್ಮಿಚ್ಛೆಯಂತೆ ಇಂದು ದೇವಾಲಯಗಳಲ್ಲಿ ಕಾಣಿಕೆ ಸಲ್ಲಿಸುತ್ತಾರೆ.

ಅದರಂತೆ ವಿಶ್ವದ ಶ್ರೀಮಂತರ ದೇವಾಲಯದ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿರುವ ತಿರುಪತಿಯ ವೆಂಕಟೇಶ್ವರ ದೇವಾಲಯದಲ್ಲಿಯೂ ವಿಶೇಷ ಪೂಜೆ ನೆರವೇರುತ್ತಿದೆ. ಈ ಸಂದರ್ಭದಲ್ಲಿ ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಯೆಲ್ಲ ಅವರು ದೇವಸ್ಥಾನಕ್ಕೆ 2 ಕೋಟಿ ರೂಪಾಯಿ ದೇಣಿಗೆಯಾಗಿ ನೀಡಿದ್ದಾರೆ.

ವೈಕುಂಠ ಏಕಾದಶಿ ನಿಮಿತ್ತ ಇದನ್ನು ನೀಡಿರುವುದಾಗಿ ಅವರು ಹೇಳಿದ್ದಾರೆ. ಕೃಷ್ಣ ಮತ್ತು ಅವರ ಹೆಂಡತಿ ಸುಚಿತ್ರ ತಿರುಪತಿ ದೇವಸ್ಥಾನದ (ಟಿಟಿಡಿ) ಅಧ್ಯಕ್ಷ ವೈ.ವಿ ಸುಬ್ಬಾ ರೆಡ್ಡಿ ಅವರಿಗೆ ಈ ಮೊತ್ತದ ಚೆಕ್​​ ಹಸ್ತಾಂತರಿಸಿದ್ದಾರೆ. ಈ ಹಣವನ್ನು ದೇವಸ್ಥಾನದ ಅನ್ನಪ್ರಸಾದಕ್ಕೆ ಬಳಸಿಕೊಳ್ಳುವಂತೆ ಅವರು ಮನವಿ ಮಾಡಿರುವುದಾಗಿ ತಿಳಿದುಬಂದಿದೆ.

ಈ ಶುಭದಿನದಂದು ಕೃಷ್ಣ ದಂಪತಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಾಲಯ ಆಡಳಿತ ಮಂಡಳಿ ಪ್ರಸಾದದ ಜತೆಗೆ ಅವರಿಗೆ ಪವಿತ್ರ ರೇಷ್ಮೆ ಬಟ್ಟೆಯನ್ನು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net