ನಿಮ್ಮ ಮನೆ ಸಮೀಪ ಲಸಿಕಾ ಕೇಂದ್ರ ಎಲ್ಲಿದೆ ಎಂದು ತಿಳಿಸಲಿದೆ ವಾಟ್ಸ್‌ಆ್ಯಪ್‌: ಮಾಡಬೇಕಾದುದು ಇಷ್ಟು...

vaccine
Published on

ನವದೆಹಲಿ: ಕಳೆದ ವರ್ಷದಿಂದ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿರುವ ವಾಟ್ಸ್‌ಆ್ಯಪ್‌ ಇದೀಗ ಲಸಿಕೆ ಕೇಂದ್ರಗಳ ಬಗ್ಗೆಯೂ ಮಾಹಿತಿ ನೀಡಲಿದೆ.

MyGov WhatsApp ಬಾಟ್ ಮೂಲಕ ಈ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಅದಕ್ಕಾಗಿ ಮಾಡಬೇಕಾದುದು ಇಷ್ಟು
* ಮೊದಲು +919013151515 ನಂಬರ್‌ ಸೇವ್‌ ಮಾಡಿಕೊಳ್ಳಿ

* ಅದಕ್ಕೆ ನಮಸ್ತೆ ಎಂದು ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿ, ಸ್ವಲ್ಪ ಹೊತ್ತು ವೇಟ್‌ ಮಾಡಿ.

* ಕೂಡಲೇ ನಿಮಗೆ ಪ್ರತಿಕ್ರಿಯೆ ಬರುತ್ತದೆ

* ನಂತರ ನಿಮ್ಮ ಪ್ರದೇಶದ ಪಿನ್‌ ನಂಬರ್‌ ಕೇಳಲಾಗುತ್ತದೆ.

* ನೀವು ಇದನ್ನು ಕಳುಹಿಸಿದ ನಂತರ ನಿಮ್ಮ ಹತ್ತಿರದ ಪ್ರದೇಶಗಳ ಲಸಿಕೆ ಕೇಂದ್ರಗಳ ಮಾಹಿತಿಯ ಲಿಸ್ಟ್‌ ಕಳುಹಿಸಲಾಗುತ್ತದೆ.

ಇದರ ಹೊರತಾಗಿಯೂ ಇನ್ನೊಂದು ಮಾರ್ಗವಿದೆ. ಅದೇನೆಂದರೆ http://wa.me/919013151515 ಕ್ಲಿಕ್‌ ಮಾಡಿದರೆ ನಿಮಗೆ ಸಂಪೂರ್ಣ ಮಾಹಿತಿ ಲಭ್ಯ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net