ಬುದ್ಧಿ ಚುರುಕಾಗುತ್ತೆ ಎಂದು ವೃದ್ಧನ ಕೊಲೆ ಮಾಡಿ ಮೆದುಳು, ಅಂಗಾಂಗ ತಿಂದ ಭೂಪ- ಮನೆ ಜಾಲಾಡಿ ಬೆಚ್ಚಿಬಿದ್ದ ಪೊಲೀಸರು!

murder
Published on

ಇಡಾಹೋ (ಯುರೋಪ್‌): ಮನುಷ್ಯರ ಮೆದುಳು ತಿಂದರೆ ಬುದ್ಧಿ ಚುರುಕಾಗುತ್ತದೆ ಎಂಬ ಮಾತನ್ನು ನಂಬಿ ಇಲ್ಲೊಬ್ಬ ವ್ಯಕ್ತಿ ಭಯಾನಕ ಕೃತ್ಯ ಎಸಗಿದ್ದಾನೆ.

ಜೇಮ್ಸ್ ಡೇವಿಡ್ ರಸ್ಸೆಲ್ ಎಂಬಾತ ಈ ವಿಕೃತ ಮೆರೆದಿದ್ದು, 70 ವರ್ಷದ ವೃದ್ಧ ಡೇವಿಡ್ ಫ್ಲಾಗೆಟ್‌ ಎಂಬಾತನ ಕೊಲೆ ಮಾಡಿ ನ ಆತನ ಮೆದುಳು ಮತ್ತು ಅಂಗಾಂಗಗಳನ್ನು ತಿಂದಿದ್ದಾನೆ. ಈ ಘಟನೆ ನಡೆದಿರುವುದು ಯುರೋಪ್‍ನ ಇಡಾಹೊ ಎಂಬಲ್ಲಿ.

ಡೇವಿಡ್ ಫ್ಲಾಗೆಟ್‌ ಕಾಣೆಯಾಗಿರುವ ಬಗ್ಗೆ ಆತನ ಮನೆಯವರು ದೂರು ದಾಖಲಿಸಿದ್ದರು. ನಂತರ ತನಿಖೆ ಕೈಗೊಂಡ ಪೊಲೀಸರಿಗೆ ಆತನ ಶವ ಜೇಮ್ಸ್ ಡೇವಿಡ್ ರಸ್ಸೆಲ್‌ನ ಕಾರಿನ ಒಳಗೆ ಇರುವುದು ಕಂಡುಬಂದಿತ್ತು. ಅಂಗಾಂಗಗಳು ಛಿದ್ರವಾಗಿದ್ದವು, ಮಿದುಳಿನ ಭಾಗ ಹರಿಯಲಾಗಿತ್ತು. ಕೈ, ಕಾಲುಗಳನ್ನು ಟೇಪಿನಿಂದ ಕಟ್ಟಲಾಗಿತ್ತು.

ಈ ಬಗ್ಗೆ ಜೇಮ್ಸ್ ಡೇವಿಡ್‌ನ ತನಿಖೆ ಮಾಡಿದಾಗ ತನಗೇನೂ ಗೊತ್ತೇ ಇಲ್ಲ. ಈ ಕಾರನ್ನು ಅನೇಕ ದಿನಗಳಿಂದ ಬಳಸುತ್ತಿಲ್ಲ ಎಂದಿದ್ದ. ನಂತರ ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಈ ಪಾಪಿ ತನ್ನ ಭಯಾನಕ ಕೃತ್ಯ ವಿವರಿಸಿದ್ದಾನೆ. ಪೊಲೀಸರು ಆತನ ಮನೆ ಶೋಧಿಸಿದಾಗ ಮನೆಯ ತುಂಬೆಲ್ಲಾ ರಕ್ತ ಬಿದ್ದಿರುವುದು ಕಂಡಿದೆ. ಪೊಲೀಸರೇ ಇದನ್ನು ಕಂಡು ಬೆಚ್ಚಿಬಿದ್ದಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net