

ಲಖನೌ: ಹೆಣ್ಣುಮಕ್ಕಳನ್ನು ಕಂಡಾಕ್ಷಣ ಅವರನ್ನು ಚುಡಾಯಿಸುವುದು ಎಂದರೆ ಕೆಲವು ಪುರುಷರಿಗೆ ಬಹಳ ಪ್ರೀತಿ. ಹೆಣ್ಣುಮಕ್ಕಳ ಬಗ್ಗೆ ಅಶ್ಲೀಲವಾಗಿ ಚುಡಾಯಿಸಿ ಮಜಾ ತೆಗೆದುಕೊಳ್ಳುವವರಿಗೇನೂ ಕಮ್ಮಿ ಇಲ್ಲ. ಆದರೆ ಹೀಗೆ ಮಾಡಿದಾಗಲೆಲ್ಲಾ ಹೆಣ್ಣುಮಕ್ಕಳು ಸುಮ್ಮನೇ ಹೋಗುತ್ತಾರೆ ಎಂದುಕೊಳ್ಳಬೇಡಿ. ಗ್ರಹಚಾರ ಕೆಟ್ಟರೆ ಹೀಗೂ ಆಗಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ಈ ವಿಡಿಯೋ ನೋಡಿದರೆ, ಎಂಥ ಪುರುಷರಿಗೂ ಹೆಣ್ಣುಮಕ್ಕಳ ಸಹವಾಡ ಬೇಡವೇ ಬೇಡ ಎಂದು ಎನಿಸಬಹುದು.
ಈ ಘಟನೆ ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಓರೈ ನಗರದಲ್ಲಿ ನಡೆದಿದೆ. ಕುಡಿತ ಮತ್ತಿನಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಅಸಭ್ಯವಾಗಿ ಚುಡಾಯಿಸಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ತಡ ಮಾಡದೇ ಚಪ್ಪಲಿಯಿಂದ ಆತನನ್ನು ಪಟಪಟ ಎಂದು ಬಾರಿಸಿದ್ದಾಳೆ. ಮಹಿಳೆಯ ಕೋಪಕ್ಕೆ ಬೆದರಿದ ವ್ಯಕ್ತಿ ಏನೂ ಮಾಡಲು ಆಗದೇ ಸುಮ್ಮನೇ ಮುದುಡಿಕೊಂಡು ಕುಳಿತು ಏಟು ತಿನ್ನುತ್ತಿದ್ದಾನೆ!
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ 20 ಸೆಕೆಂಡ್ ಇರುವ ವೀಡಿಯೋದಲ್ಲಿ ಮಹಿಳೆ 40 ಬಾರಿ ಚಪ್ಪಲಿಯಿಂದ ಆತನಿಗೆ ಬಾರಿಸಿರುವುದನ್ನು ಕಾಣಬಹುದಾಗಿದೆ. ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. (ಏಜೆನ್ಸೀಸ್)
ವಿಡಿಯೋ ಇಲ್ಲಿದೆ ನೋಡಿ: