ಆನ್‌ಲೈನ್‌ ಕ್ಲಾಸ್‌ನಲ್ಲಿ ದಿಢೀರ್‌ ಬಂತು ಅರೆಬೆತ್ತಲೆ ಡಾನ್ಸ್‌- ದಂಗಾದ ಶಿಕ್ಷಕರು, ವಿದ್ಯಾರ್ಥಿಗಳು

onlineclass
ಸಾಂದರ್ಭಿಕ ಚಿತ್ರ
Published on

ಕಾಞಂಗಾಡ್( (ಕೇರಳ): ಆನ್‌ಲೈನ್‌ ತರಗತಿ ಮತ್ತೆ ಹಲವೆಡೆ ಶುರುವಾಗಿರುವ ಬೆನ್ನಲ್ಲೇ ಅಸಂಬದ್ಧ ವಿಡಿಯೋಗಳು ಹರಿದಾಡುವುದು ಶುರುವಾಗಿದೆ. ನಕಲಿ ಐಪಿ ಅಡ್ರೆಸ್​ ಬಳಸಿಕೊಂಡು ದುಷ್ಕರ್ಮಿಗಳು ವಿಡಿಯೋ ಹರಿಬಿಡುತ್ತಿದ್ದಾರೆ. ಅಂಥದ್ದೇ ಒಂದು ಅಶ್ಲೀಲ ವಿಡಿಯೋ ಕೇರಳದ ಕಾಞಂಗಾಡ್ದಲ್ಲಿ ನಡೆದಿದೆ.

ಇಲ್ಲಿಯ ಶಾಲೆಯೊಂದರ ಆನ್‌ಲೈನ್‌ ಕ್ಲಾಸ್‌ ನಡೆಯುತ್ತಿದ್ದ ವೇಳೆ ಯಾವುದೋ ಒಬ್ಬ ವ್ಯಕ್ತಿ ಮುಖ ಮುಚ್ಚಿಕೊಂಡು, ಅರೆಬೆತ್ತಲೆಯಾಗಿ ಡಾನ್ಸ್‌ ಮಾಡಿದ್ದು, ಅದು ಆನ್‌ಲೈನ್‌ಲ್ಲಿ ಇರುವ ಮಕ್ಕಳಿಗೆ ಕಾಣಿಸಿದೆ. ಮಕ್ಕಳು ಹಾಗೂ ಶಿಕ್ಷಕರು ಅರೆಕ್ಷಣ ಇದನ್ನು ನೋಡಿ ದಂಗಾಗಿದ್ದಾರೆ.

ಕೂಡಲೇ ಶಿಕ್ಷಕರು ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ಆಗುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಕೇರಳ ಶಿಕ್ಷಣ ಸಚಿವ ವಿ. ಶಿವನ್​ಕುಟ್ಟಿ ತನಿಖೆ ಅವರಿಗೆ ಶಿಕ್ಷಕರು ಮಾಹಿತಿ ನೀಡಿದ್ದಾರೆ.

ಶಿಕ್ಷಣ ಇಲಾಖೆ ಪ್ರಾದೇಶಿಕ ಉಪನಿರ್ದೇಶಕರು ಶಾಲೆಗೆ ಭೇಟಿ ನೀಡಿ ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ. ಈ ಕುರಿತು ಶಾಲಾ ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿದ್ದು, ತಮ್ಮ ಶಾಲೆಯ ಯಾವುದೇ ವಿದ್ಯಾರ್ಥಿ ಐಪಿ ಅಡ್ರೆಸ್​​ ದುರುಪಯೋಗ ಪಡಿಸಿಕೊಂಡಿಲ್ಲ ಎಂದಿದೆ. ಇದುವರೆಗೆ ಶಾಲಾ ಆಡಳಿತ ಮಂಡಳಿಯಿಂದ ಯಾವುದೇ ರೀತಿಯ ದೂರು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net