

ಯೂಕ್ರೇನ್: ಯೂಕ್ರೇನ್ ವಿರುದ್ಧ ರಷ್ಯಾ ಸಮರ ಸಾರಿ ಆರು ತಿಂಗಳು ಕಳೆಯುತ್ತಾ ಬಂದಿದೆ. ಯುದ್ಧ ದಿನೇ ದಿನೇ ಭೀಕರ ರೂಪ ಪಡೆಯುತ್ತಲೇ ಇದೆ. ಇದರಲ್ಲಿ ಸಹಸ್ರಾರು ಮಂದಿ ಮೃತಪಟ್ಟಿದ್ದು, ಸದ್ಯ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ. ತಾವೂ ಯೋಧನ ಡ್ರೆಸ್ ತೊಟ್ಟು ಯುದ್ಧದ ಕಣಕ್ಕಿಳಿಯುವಂತೆ ಫೋಟೋಗಳಿಗೆ ಪೋಸ್ ನೀಡಿ ಜಗತ್ತಿನ ಗಮನ ಸೆಳೆದಿದ್ದ ಯೂಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಈಗ ಪತ್ನಿಯೊಂದಿಗೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಯುದ್ಧಭೂಮಿಗೆ ಇಳಿದಿರುವುದಾಗಿ ಹೇಳಿದಾಗ ಇವರನ್ನು ಹೊಗಳಿದವರೇ ಇದೀಗ ಇವರ ವಿರುದ್ಧ ಟೀಕಾ ಪ್ರಹಾರ ಶುರು ಮಾಡಿದ್ದಾರೆ. ಅದೂ ಫ್ಯಾಷನ್ ಮ್ಯಾಗಜೀನ್‌ಗಾಗಿ ಯುದ್ಧಭೂಮಿಯ ನಡುವೆಯೇ ಪತ್ನಿ ಒಲೆನಾ ಜತೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ ಅಧ್ಯಕ್ಷ!
‘
ಈ ಚಿತ್ರಗಳನ್ನು ಒಲೆನಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಸಂತಸದಿಂದ ಹಂಚಿಕೊಂಡಿದ್ದಾರೆ. ವೋಗ್ ನಿಯತಕಾಲಿಕದ ಮುಖಪುಟದಲ್ಲಿ ಕಾಣಿಸಿಕೊಳ್ಳುವುದು ಅನೇಕ ಜನರ ಕನಸು ಮತ್ತು ಇದು ಅತ್ಯಂತ ಪ್ರತಿಷ್ಠೆಯ ವಿಷಯವಾಗಿದೆ, ಈ ಆಸೆ ಈಡೇರಿದೆ ಎಂದು ಒಲೆನಾ ಬರೆದುಕೊಂಡಿದ್ದಾರೆ.
ಯುದ್ಧದ ಬಗ್ಗೆಯೂ ಮಾತನಾಡಿದ ಅವರು, ಯುದ್ಧದಿಂದ ಬಳಲುತ್ತಿರುವ ಯೂಕ್ರೇನ್ನ ಪ್ರತಿಯೊಬ್ಬ ಮಹಿಳೆಯನ್ನು ನಿರಾಶ್ರಿತರ ಶಿಬಿರಗಳಲ್ಲಿ ನೋಡಲು ನಾನು ಬಯಸುತ್ತೇನೆ ಎಂದಿದ್ದಾರೆ. ಆದರೆ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.
ಸೈನಿಕರಿಗೆ ತಾವು ಬೆಂಬಲಿಸುತ್ತಿರುವುದಾಗಿ ಸೈನಿಕರ ಸಮವಸ್ತ್ರ ಧರಿಸಿ, ಕೈಯಲ್ಲಿ ಬಂದೂಕು ಹಿಡಿದು ಇವರು ಫೋಟೋಗೆ ಪೋಸ್ ಕೊಟ್ಟಾಗ, ಇವರೇ ಯುದ್ಧಭೂಮಿಗೆ ಇಳಿದು ಶತ್ರುಗಳ ಜತೆ ಸೆಣೆಸಾಡಿದರು ಎಂದು ಭಾರಿ ಸುದ್ದಿಯಾಗಿತ್ತು. ಇವರ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿತ್ತು. ತಮ್ಮ ತಮ್ಮ ದೇಶದ ನಾಯಕನನ್ನು ಇವರಿಗೆ ಹೋಲಿಸಿ, ಯುದ್ಧ ಭೂಮಿಗೆ ಹೋಗದ ತಮ್ಮ ನಾಯಕರನ್ನು ಟೀಕಿಸಿದವರೇ ಹೆಚ್ಚು.
ಅಂದ ಹಾಗೆ ಈ ಜೋಡಿ ಒಂದೇ ಶಾಲೆಯಲ್ಲಿ ಅಧ್ಯಯನ ಮಾಡಿದವರು, ಪ್ರೀತಿಸಿ ಮದುವೆಯಾಗಿದ್ದಾರೆ. ಒಲೆನಾ ವಾಸ್ತುಶಿಲ್ಪವನ್ನು ಅಧ್ಯಯನ ಮಾಡಿದ್ದಾರೆ. ನಂತರ ಬರವಣಿಗೆಯಲ್ಲಿ ಆಸಕ್ತಿ ತೋರಿದರು. ವೊಲೊಡಿಮಿರ್ ರಾಜಕೀಯಕ್ಕೆ ಬರುವ ಮೊದಲು ಹಾಸ್ಯನಟ ಎಂದು ಗುರುತಿಸಿಕೊಂಡವರು. ಆಗ ಇವರ ವಿವಾಹ ನಡೆದಿದೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. (ಏಜೆನ್ಸೀಸ್)