ಇಂದಿರಾಗಾಂಧಿ ಅಣುಶಕ್ತಿ ಘಟಕದಲ್ಲಿ 337 ತಾಂತ್ರಿಕ ಉದ್ಯೋಗಗಳಿಗೆ ಅರ್ಜಿ ಆಹ್ವಾನ- ಎಸ್‌ಎಸ್‌ಎಲ್‌ಸಿಯಾದವರಿಗೂ ಅವಕಾಶ

udyoga- indiragandhi
Published on

ಇಂದಿರಾ ಗಾಂಧಿ ಸೆಂಟರ್​ ಫಾರ್​ ಆಟಾಮಿಕ್​ ರಿಸರ್ಚ್​ (ಐಜಿಸಿಎಆರ್​) ಸಂಸ್ಥೆಯ ಕಲ್ಪಕಂ ಟಕದಲ್ಲಿ ಹಲವು ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಹಾಗೂ ಸ್ಟೈಪೆಂಡರಿ ಟ್ರೇನಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಅಭ್ಯಥಿರ್ಗಳು ಅರ್ಜಿ ಸಲ್ಲಿಸಬಹುದು.

ಒಟ್ಟು ಹುದ್ದೆಗಳು: 337

ಆಯ್ಕೆ ಪ್ರಕ್ರಿಯೆಗೆ ಹಾಜರಾಗುವ ಎಸ್​ಸಿ, ಎಸ್​ಟಿ ಅಭ್ಯಥಿರ್ಗಳಿಗೆ ಹಾಗೂ ಟೆಕ್ನಿಕಲ್​ ಆಫೀಸರ್​ /ಸಿ ಹುದ್ದೆಗೆ ಸಂದರ್ಶನಕ್ಕೆ ಹಾಜರಾಗುವ ಅಭ್ಯಥಿರ್ಗಳಿಗೆ ದ್ವೀತಿಯ ದರ್ಜೆಯ ರೈಲಿನ ಪ್ರಯಾಣ ಭತ್ಯೆ ನೀಡಲಾಗುವುದು. ಬೆಂಗಳೂರು ಸೇರಿ ಇತರ 26 ನಗರಗಳಲ್ಲಿ ಪರೀಕ್ಷಾ ಕೇಂದ್ರ ಇರಲಿದೆ.

ಹುದ್ದೆ ವಿವರ
- ನೇರ ನೇಮಕಾತಿ - 98
* ಸೈಂಟಿಫಿಕ್​ ಆಫೀಸರ್​/ಇ - 1 * ಟೆಕ್ನಿಕಲ್​ ಆಫೀಸರ್​/ಇ - 1 * ಸೈಂಟಿಫಿಕ್​ ಆಫೀಸರ್​/ಡಿ - 3 * ಟೆಕ್ನಿಕಲ್​ ಆಫೀಸರ್​/ಸಿ - 41 * ಟೆಕ್ನಿಷಿಯನ್​/ಬಿ (ಕ್ರೇನ್​ ಆಪರೇಟರ್​) -1 * ಸ್ಟೆನೋಗ್ರಾರ್​ ಗ್ರೇಡ್​3 - 4 * ಅಪ್ಪರ್​ ಡಿವಿಷನ್​ ಕ್ಲರ್ಕ್​ - 8 * ಡೆವರ್​ (ಒಜಿ) - 2 * ಸೆಕ್ಯುರಿಟಿ ಗಾರ್ಡ್​ - 2 * ವರ್ಕ್​ ಅಸಿಸ್ಟೆಂಟ್​/ಎ - 20 * ಕ್ಯಾಂಟೀನ್​ ಅಟೆಂಡೆಂಟ್​ - 15
- ಸ್ಟೈಪೆಂಡರಿ ಟ್ರೇನಿ - 239
* ಸ್ಟೈಪೆಂಡರಿ ಟ್ರೇನಿ ಕೆಟಗರಿ 1 - 68 * ಸ್ಟೈಪೆಂಡರಿ ಟ್ರೇನಿ ಕೆಟಗರಿ 2 - 171

ಶೈಕ್ಷಣಿಕ ಅರ್ಹತೆ: ಎಸ್ಸೆಸ್ಸೆಲ್ಸಿ, ಡಿಪ್ಲೊಮಾ, ಐಟಿಐ, ಯಾವುದೇ ಪದವಿ, ಎಸ್​ಎಸ್​ಸಿ, ಮೆಟಲಜಿರ್ಕಲ್​/ ಮೆಟಿರಿಯಲ್​, ಕೆಮಿಕಲ್​, ಫಿಜಿಕ್ಸ್​/ಎಲೆಕ್ಟ್ರಾನಿಕ್ಸ್​/ಇಂಜಿನಿಯರಿಂಗ್​, ಅಟ್ಮಾಸ್ಫಿಯರಿಕ್​ ಸೈನ್ಸ್​/ ಸಿವಿಲ್​, ಕಂಪ್ಯೂಟರ್​ ಸೈನ್ಸ್​, ಎಲೆಕ್ಟ್ರಿಕಲ್​, ಎಲೆಕ್ಟ್ರಾನಿಕ್ಸ್​, ಇನ್​ಸ್ಟ್ರುಮೆಂಟೇಷನ್​,ಮೆಕ್ಯಾನಿಕಲ್​, ಮೆಕ್ಯಾಟ್ರೊನಿಕ್ಸ್​, ಕೆಮಿಸ್ಟ್ರಿಯಲ್ಲಿ ನಲ್ಲಿ ಬಿಇ, ಬಿ.ಟೆಕ್​, ಪಿಎಚ್​ಡಿ ಮಾಡಿದ್ದು, ಕನಿಷ್ಠ ಶೇ. 60 ಅಂಕ ಪಡೆದಿರಬೇಕು.

ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ 18 ವರ್ಷದಿಂದ ಗರಿಷ್ಠ 40 ವರ್ಷ ಇದೆ. ಮೀಸಲಾತಿ ಅಭ್ಯಥಿರ್ಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

ಅರ್ಜಿಶುಲ್ಕ: ಸೈಂಟಿಫಿಕ್​ ಆಫೀಸರ್​, ಟೆಕ್ನಿಕಲ್​ ಆಫೀಸರ್​ ಹುದ್ದೆಗಳಿಗೆ 300 ರೂ., ಸ್ಟೈಪೆಂಡರಿ ಟ್ರೇನಿ ಕೆಟಗರಿ 1ಕ್ಕೆ 200 ರೂ. ಹಾಗೂ ಉಳಿದ ಹುದ್ದೆಗಳಿಗೆ 100 ರೂ. ಅರ್ಜಿಶುಲ್ಕ ನಿಗದಿಪಡಿಸಲಾಗಿದೆ.

ವೇತನ: ನೇರ ನೇಮಕಾತಿ ಹುದ್ದೆಗಳಲ್ಲಿ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 18,000 ರೂ. ನಿಂದ 78,800 ರೂ. ವೇತನ ಜತೆ ಇತರ ಭತ್ಯೆಗಳನ್ನು ನೀಡಲಾಗುವುದು. ಸ್ಟೈಪೆಂಡರಿ ಟ್ರೇನಿ ಕೆಟಗರಿ 1ಕ್ಕೆ ಮೊದಲ ವರ್ಷ ಮಾಸಿಕ 16,000 ರೂ., 2ನೇ ವರ್ಷ 18,000 ರೂ. ಸ್ಟೈಪೆಂಡ್​ ನೀಡಲಾಗುವುದು. ಕೆಟಗರಿ 2ಗೆ ಮೊದಲ ವರ್ಷ 10,500 ರೂ., 2ನೇ ವರ್ಷ ಮಾಸಿಕ 12,500 ರೂ. ನೀಡಲಾಗುವುದು. ಇದರ ಜತೆ ಒಂದು ಬಾರಿ ಪುಸ್ತಕ ಭತ್ಯೆಯಾಗಿ 3,000 ರೂ. ನೀಡಲಾಗುವುದು.

ಅರ್ಜಿಸಲ್ಲಿಸಲು ಕೊನೇ ದಿನ: 14.5.2021 (ಅಂಚೆ ಮೂಲಕ ಅರ್ಜಿ ಸಲ್ಲಿಕೆಗೆ 20.5.2021)
ಅಧಿಸೂಚನೆಗೆ: https://bit.ly/32TfM6A
ಮಾಹಿತಿಗೆ: http://www.igcar.gov.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net