ವಿವಿಧ ತಾಂತ್ರಿಕ ಪದವೀಧರರಿಗೆ ಅಣುವಿದ್ಯುತ್‌ಸ್ಥಾವರದಲ್ಲಿದೆ ಉದ್ಯೋಗ- 21 ಹುದ್ದೆಗಳಿಗೆ ಆಹ್ವಾನ

udyoga-ECIL
Published on

ಪರಮಾಣು ಇಂಧನ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಸಾರ್ವಜನಿಕ ವಲಯದ ಉದ್ಯಮವಾಗಿದ್ದು, ಪ್ರಸ್ತುತ ಕೈಗಾ ಅಣು ವಿದ್ಯುತ್ ಸ್ಥಾವರ ಸೇರಿ ವಿವಿಧೆಡೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಂದರ್ಶನ ನಡೆಸುತ್ತಿದೆ.

ಒಟ್ಟು ಹುದ್ದೆಗಳು: 21

ಮಹಾರಾಷ್ಟ್ರದ ತಾರಾಪುರ್, ಮುಂಬೈ, ದೆಹಲಿ, ಕೋಲ್ಕತಾ ಹಾಗೂ ಕೋಟಾ ಮೊದಲಾದ ಕಡೆಗಳಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಿರುವವರು ಅರ್ಜಿ ಸಲ್ಲಿಸಬಹುದು. ಇಸಿಐಎಲ್​ನ ಯೋಜನೆಗಳ ಅವಶ್ಯಕತೆಗೆ ತಕ್ಕಂತೆ 1 ವರ್ಷದ ಅವಧಿಗೆ ಸ್ಥಿರ ಒಪ್ಪಂದದ ಆಧಾರದ ಮೇಲೆ ವಿವಿಧ ಹಂತಗಳಲ್ಲಿ ಟೆಕ್ನಿಕಲ್ ಆಫೀಸರ್, ಸೈಂಟಿಫಿಕ್ ಅಸಿಸ್ಟೆಂಟ್ ಹಾಗೂ ಜೂನಿಯರ್ ಆರ್ಟಿಸನ್​ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಹುದ್ದೆಗಳಲ್ಲಿ ಮೀಸಲಾತಿ ನಿಗದಿಯಾಗಿದ್ದು, ಸಾಮಾನ್ಯವರ್ಗದ ಅಭ್ಯರ್ಥಿಗೆ 15 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 5, ಎಸ್​ಸಿಗೆ 1 ಸ್ಥಾನ ಮೀಸಲಿರಿಸಲಾಗಿದೆ.

ಹುದ್ದೆ, ಸಂಖ್ಯೆ ವಿವರ

* ಟೆಕ್ನಿಕಲ್ ಆಫೀಸರ್ (ಕೆಟಗರಿ1 ರಿಂದ 8) - 12

* ಸೈಂಟಿಫಿಕ್ ಅಸಿಸ್ಟೆಂಟ್ (ಕೆಟಗರಿ 1ರಿಂದ 3) - 4

* ಜೂನಿಯರ್ ಆರ್ಟಿಸನ್ - 5

ವಿದ್ಯಾರ್ಹತೆ: ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್, ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಆಂಡ್ ಇನ್​ಸ್ಟ್ರುಮೆಂಟೇಷನ್, ಕಂಪ್ಯೂಟರ್ ಸೈನ್ಸ್, ಇನ್​ಫಮೇಷನ್ ಟೆಕ್ನಾಲಜಿಯಲ್ಲಿ ಪದವಿ ಪಡೆದಿದ್ದು, ಸೈಂಟಿಫಿಕ್ ಅಸಿಸ್ಟೆಂಟ್​ಗೆ ಡಿಪ್ಲೊಮಾ ಹಾಗೂ ಜೂ. ಆರ್ಟಿಸನ್​ಗೆ ಐಟಿಐ ಕೋರ್ಸ್ ಮಾಡಿದ್ದು, ಎಲ್ಲದರಲ್ಲೂ ಕನಿಷ್ಠ ಶೇ.60 ಅಂಕ ಪಡೆದಿರಬೇಕು.

ವಯೋಮಿತಿ: ಟೆಕ್ನಿಕಲ್ ಅಸಿಸ್ಟೆಂಟ್​ಗೆ ಗರಿಷ್ಠ 30 ವರ್ಷ, ಸೈಂಟಿಫಿಕ್ ಅಸಿಸ್ಟೆಂಟ್ ಹಾಗೂ ಜೂನಿಯರ್ ಆರ್ಟಿಸನ್​ಗೆ ಗರಿಷ್ಠ 25 ವರ್ಷ. ಸರ್ಕಾರದ ನಿಯಮದನ್ವಯ ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.

ವೇತನ: ಜೂನಿಯರ್ ಆರ್ಟಿಸನ್​ಗೆ ಮಾಸಿಕ 18,564 ರೂ., ಸೈಂಟಿಫಿಕ್ ಅಸಿಸ್ಟೆಂಟ್​ಗೆ 20,384 ರೂ., ಟೆಕ್ನಿಕಲ್ ಆಫೀಸರ್​ಗೆ ಮಾಸಿಕ 23,000 ರೂ. ವೇತನ ನಿಗದಿಯಾಗಿದೆ.

ಆಯ್ಕೆ ಪ್ರಕ್ರಿಯೆ: ಹುದ್ದೆಗಳಿಗೆ ಅನುಸಾರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಕೆಲ ಹುದ್ದೆಗೆ ಶೈಕ್ಷಣಿಕ ಹಂತದಲ್ಲಿ ಪಡೆದ ಅಂಕ ಆಧರಿಸಿ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಇನ್ನು ಕೆಲ ಹುದ್ದೆಗಳಿಗೆ ಶೈಕ್ಷಣಿಕ ಅಂಕದ ಜತೆಗೆ ಲಿಖಿತ ಪರೀಕ್ಷೆ/ ಟ್ರೇಡ್ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಕೈಗಾದಲ್ಲಿನ ಹುದ್ದೆಗಳಿಗೆ o. 1/1, 2nd floor, LIC Building, Sampige Road, Malleswaram, Bengaluru - 560 003 ವಿಳಾಸದಲ್ಲಿ ಸಂದರ್ಶನ ನಡೆಸಲಾಗುವುದು.

ಸಂದರ್ಶನ ನಡೆಯುವ ದಿನಾಂಕ:

ಕೋಟಾದಲ್ಲಿ ಡಿ.2ರಂದು ಸಂದರ್ಶನ ನಡೆಯುವುದು, ಉಳಿದ ಸ್ಥಳಗಳಲ್ಲಿ ಡಿ.4ರಂದು ಸಂದರ್ಶನ ನಡೆಸಲಾಗುವುದು.

ಅಧಿಸೂಚನೆಗೆ: https://bit.ly/3FLez2S

ಮಾಹಿತಿಗೆ: http://www.ecil.co.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net