ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಯಂಗ್​ ಪ್ರೊಫೆಷನಲ್ಸ್​ ಹುದ್ದೆಗೆ ಅರ್ಜಿ ಆಹ್ವಾನ

udyoga- indian
Published on

ಇಂಡಿಯನ್​ ಕೌನ್ಸಿಲ್​ ಆಫ್‌ ಅಗ್ರಿಕಲ್ಚರಲ್​ ರಿಸರ್ಚ್​ (ಐಸಿಎಆರ್​)ನ ಮುಖ್ಯ ಕಚೇರಿಯ ತಂತ್ರಜ್ಞಾನ ವಿಭಾಗಕ್ಕೆ ಯಂಗ್​ ಪ್ರೊಫೆಷನಲ್​ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು,ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್​ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳು: 14

ಐಸಿಎಆರ್​ನಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳು ಒಂದು ವರ್ಷದ ಅವಧಿಗೆ ಒಳಪಟ್ಟಿದ್ದು, ನಂತರ ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಿಸಲಾಗುವುದು. ಕಚೇರಿ ಅವಧಿಗಿಂತ ಹೆಚ್ಚಿನ ಅವಧಿ ಕೆಲಸ ಮಾಡಿದರೆ ಯಾವುದೇ ಹೆಚ್ಚುವರಿ ವೇತನ ಇರುವುದಿಲ್ಲ, ವರ್ಷಕ್ಕೆ 8 ದಿನ ಸಾಮಾನ್ಯ ರಜೆ, 2 ರಿಸ್ಟ್ರಿಕ್ಟೆಡ್​ ರಜೆ ಜತೆ ವಾರದ ರಜೆ ಇರುತ್ತದೆ. ಮಹಿಳಾ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ಮೆಟನಿರ್ಟಿ ರಜೆ ಇರುತ್ತದೆ.

ಹುದ್ದೆ ವಿವರ

* ಯಂಗ್​ ಪ್ರೊಫೆಷನಲ್​-ಐ - (ಫೈನಾನ್ಸ್​ ಆ್ಯಂಡ್​ ಅಕೌಂಟ್ಸ್​) - 7

* ಯಂಗ್​ ಪ್ರೊಫೆಷನಲ್​-ಐಐ - (ಫೈನಾನ್ಸ್​ ಆ್ಯಂಡ್​ ಅಕೌಂಟ್ಸ್​) - 7

ವಿದ್ಯಾರ್ಹತೆ: ಬಿಕಾಂ/ಬಿಬಿಎ/ ಬಿಬಿಎಸ್​ನಲ್ಲಿ ಶೇ.60 ಅಂಕ ಪಡೆದಿರಬೇಕು. ಅಥವಾ ಫೈನಾನ್ಸ್​ನಲ್ಲಿ ಎಂಬಿಎ ಪದವಿ ಪಡೆದಿರಬೇಕು. ಐಟಿ ಅಪ್ಲಿಕೇಷನ್ಸ್​ ಬಗ್ಗೆ ತಿಳಿದಿರಬೇಕು, ಎಸ್​ಎಂ ವರ್ಡ್​, ಎಕ್ಸಲ್​, ಪವರ್​ಪಾಯಿಂಟ್​, ಟ್ಯಾಲಿ ಹಾಗೂ ಇತರ ಸಾಫ್ಟ್‌​ವೇರ್​ ಬಳಕೆ ಜ್ಞಾನ ಇರಬೇಕು.

ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 45ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

ವೇತನ: ಯಂಗ್​ ಪ್ರೊಫೆಷನಲ್​-ಐ ಗೆ ಮಾಸಿಕ 25,000 ರೂ., ಹಾಗೂ ಯಂಗ್​ ಪ್ರೊಫೆಷನಲ್​-ಐಐಗೆ ಮಾಸಿಕ 35,000 ರೂ. ವೇತನ ನಿಗದಿಪಡಿಸಲಾಗಿದ್ದು, ಇತರ ಯಾವುದೇ ಭತ್ಯೆ ಇರುವುದಿಲ್ಲ. ಸಂಸ್ಥೆಯ ಅಧಿಕೃತ ಕೆಲಸಗಳಿಗಾಗಿ ಪ್ರವಾಸ ಕೈಗೊಂಡಲ್ಲಿ 1200 ರಿಂದ 1500 ರೂ. ಟಿಎ/ ಡಿಎ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ಪ್ಯಾನಲ್​ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾದರೆ ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.

ಸೂಚನೆ: ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳು ಅದರ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ Director (Finance), ICAR Headquarters, Krishi Bhawan, New Delhi - I I 0001

ವಿಳಾಸಕ್ಕೆ ಕಳುಹಿಸಲು ಸೂಚಿಸಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 20.7.2021

ಅಧಿಸೂಚನೆಗೆ: https://bit.ly/361a9F1

ಮಾಹಿತಿಗೆ: http://icar.org.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net