

ಬೆಂಗಳೂರಿನಲ್ಲಿರುವ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ವಿವಿಧ ಯೋಜನೆ ಆಧಾರಿತ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಯೋಜನೆ ಮುಗಿಯುವವರೆಗೆ ಅಂದರೆ 2022 ರಿಂದ 2024ರ ವರೆಗೆ ಹುದ್ದೆಯ ಅವಧಿ ಇರಲಿದೆ.
ಹುದ್ದೆ ವಿವರ
* ರಿಸರ್ಚ್ ಅಸೋಸಿಯೇಟ್ - 1
* ಜೂನಿಯರ್ ರಿಸರ್ಚ್ ಫೆಲೊ - 1
* ಜೂನಿಯರ್ ರಿಸರ್ಚ್ ಫೆಲೊ/ ಜೂ. ಪ್ರಾಜೆಕ್ಟ್ ಫೆಲೊ - 1
* ಸೀನಿಯರ್ ಪ್ರಾಜೆಕ್ಟ್ ಫೆಲೊ - 1
* ಜೂನಿಯರ್ ಪ್ರಾಜೆಕ್ಟ್ ಫೆಲೊ - 13
* ಪ್ರಾಜೆಕ್ಟ್ ಅಸಿಸ್ಟೆಂಟ್ - 6
ವಿದ್ಯಾರ್ಹತೆ: ಫಾರೆಸ್ಟ್ರಿ/ ಅಗ್ರಿಕಲ್ಚರ್/ ಹಾರ್ಟಿಕಲ್ಚರ್/ ಲ್ೈಸೈನ್ಸ್/ ಕೆಮಿಸ್ಟ್ರಿ/ ಜುವಾಲಜಿ/ ಅಗ್ರಿಕಲ್ಚರ್/ ಮೈಕ್ರೋಬಯೋಲಜಿ/ ಆಗ್ರೋಾರೆಸ್ಟ್ರಿ/ ಬಯೋಟೆಕ್ನಾಲಜಿ/ ಬಾಟ್ನಿ/ ಬಯೋಟೆಕ್/ ಜೆನೆಟಿಕ್ಸ್/ ಎನ್ವಿರಾನ್ಮೆಂಟ್ ಸೈನ್ಸ್/ ವುಡ್ಸೈನ್ಸ್ ಆ್ಯಂಡ್ ಟೆಕ್ನಾಲಜಿ/ ಫಿಜಿಕ್ಸ್ನಲ್ಲಿ ಬಿಎಸ್ಸಿ, ಎಂಎಸ್ಸಿ, ಬಿಟೆಕ್, ಕೆಮಿಸ್ಟ್ರಿಯಲ್ಲಿ ಪಿಎಚ್ಡಿ ಮಾಡಿರುವುದರ ಜತೆಗೆ ಸಂಶೋಧನಾ ಜ್ಞಾನ ಇರುವ ಅಭ್ಯರ್ಥಿಗಳಿಗೂ ಅವಕಾಶ ಇದೆ.
ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 28 ರಿಂದ 35 ವರ್ಷದವರೆಗೆ ವಯೋಮಿತಿ ಇದೆ. ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ ವಯೋಮಿತಿ ಇಲ್ಲ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.
ವೇತನ: ರಿಸರ್ಚ್ ಅಸೋಸಿಯೇಟ್ಗೆ ಮಾಸಿಕ 47,000 ರೂ., ಜೂ.ರಿಸರ್ಚ್ ಫೆಲೊಗೆ ಮಾಸಿಕ 31,000 ರೂ., ಸೀನಿಯರ್ ಪ್ರಾಜೆಕ್ಟ್ ಫಫೆಲೊಗೆ 23,000 ರೂ., ಜೂ. ಪ್ರಾಜೆಕ್ಟ್ ಫೆಲೊಗೆ ಮಾಸಿಕ 20,000 ರೂ., ಪ್ರಾಜೆಕ್ಟ್ ಅಸಿಸ್ಟೆಂಟ್ಗೆ 19,000 ರೂ. ವೇತನ ಇದ್ದು ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆ ಹೊರತುಪಡಿಸಿ ಉಳಿದ ಹುದ್ದೆಗಳಿಗೆ ಮನೆ ಬಾಡಿಗೆ ಭತ್ಯೆ ನೀಡಲಾಗುವುದು.
ಸಂದರ್ಶನ ನಡೆಯುವ ದಿನ: ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ 2021ರ ಜು.30, ಉಳಿದ ಹುದ್ದೆಗಳಿಗೆ ಜು.29 ರಂದು ಬೆಳಗ್ಗೆ 10.30ರಿಂದ ಸಂದರ್ಶನ ಆರಂಭವಾಗಲಿದ್ದು, ಬೆಳಗ್ಗೆ 9.30 ರಿಂದ 10.30ರ ಒಳಗಾಗಿ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.
ಸಂದರ್ಶನ ನಡೆಯುವ ಸ್ಥಳ: Institute of Wood Science and Technology, 18th Cross, Malleswaram, Bangalore – 560003
ಅಧಿಸೂಚನೆಗೆ: https://bit.ly/36MZLB6
ಮಾಹಿತಿಗೆ: http://iwst.icfre.gov.in