ಟೆರಿಟೋರಿಯಲ್​ ಆರ್ಮಿಯಲ್ಲಿ ಪದವೀಧರರಿಂದ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ: 1.77 ಲಕ್ಷ ರೂವರೆಗೆ ಸಂಬಳ

udyoga
Published on

ಭಾರತೀಯ ಸೇನೆಯ ಭಾಗವೇ ಆಗಿರುವ ಟೆರಿಟೋರಿಯಲ್​ ಆಮಿರ್ಯಲ್ಲಿ (ಪ್ರಾದೇಶಿಕ ಸೇನಾ ಪಡೆ) ಅಧಿಕಾರಿ ಹುದ್ದೆಗೆ ನೇಮಕ ಮಾಡಿಕೊಳ್ಳಲು ಆನ್​ಲೈನ್​ ಅರ್ಜಿ ಆಹ್ವಾನಿಸಲಾಗಿದೆ.

1857ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರಂಭವಾದ ಸ್ವಯಂಸೇವಕರ ಪಡೆಯಿಂದ ಆರಂಭವಾದ ಟೆರಿಟೋರಿಯಲ್​ ಆಮಿರ್ 1917ರ ಭಾರತೀಯ ರಕ್ಷಣಾ ಪಡೆ ಕಾಯ್ದೆಯಡಿ ವಿಶ್ವವಿದ್ಯಾಲಯಗಳಿಂದ ಸೂಕ್ತ ಅಭ್ಯರ್ಥಿಗಳನ್ನು ಸೇನೆಗೆ ಕಳುಹಿಸಲು ಸೂಚಿಸಲಾಯಿತು. ನಂತರ 1920ರಲ್ಲಿ ಟೆರಿಟೋರಿಯಲ್​ ಫೋರ್ಸ್​ಗೆ ಅನುಮೋದನೆ ದೊರಕಿತು.

ಟೆರಿಟೊರಿಯಲ್​ ಆಮಿರ್ ಇನ್​ೆಂಟ್ರಿ ಬೆಟಾಲಿಯನ್​, ಹೋಮ್​ ಆ್ಯಂಡ್​ ಹೆಲ್ತ್​ ಇನ್​ೆಂಟ್ರಿ ಬೆಟಾಲಿಯನ್ಸ್​, ಎಕಲಾಜಿಕಲ್​ ಟಾಸ್ಕ್​ೋರ್ಸ್​, ರೈಲ್ವೆ ಇಂಜಿನಿಯರಿಂಗ್​ ಟಕ, ಆಯಿಲ್​ ಸೆಕ್ಟರ್​ ಯುನಿಟ್​ ಹಾಗೂ ಜನರಲ್​ ಹಾಸ್ಪಿಟಲ್​ ಟಕಗಳನ್ನು ಒಳಗೊಂಡಿದೆ. ಪ್ರಸ್ತುತ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅಭ್ಯರ್ಥಿಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿರಬೇಕು. ಪ್ರಸ್ತುತ ಆಮಿರ್, ನೇವಿ, ಏರ್​ೋರ್ಸ್​, ಪೊಲೀಸ್​, ಜಿಆರ್​ಇಎಫ್/ ಪ್ಯಾರಾ ಮಿಲಿಟರಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ಅರ್ಹರಾಗಿರುವುದಿಲ್ಲ. ಮಹಿಳಾ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ಇದೆ.

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಪದವಿ ಪಡೆದಿರಬೇಕು.

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 42 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ರೀಸನಿಂಗ್​, ಎಲಿಮೆಂಟರಿ ಮ್ಯಾಥಮೆಟಿಕ್ಸ್​, ಸಾಮಾನ್ಯ ಜ್ಞಾನ, ಇಂಗ್ಲಿಷ್​ ವಿಷಯಗಳನ್ನು ಒಳಗೊಂಡಂತೆ ಲಿಖಿತ ಪರೀೆ ನಡೆಸಲಾಗುವುದು. ಒಎಂಆರ್​ ಶೀಟ್​ನಲ್ಲಿ ಉತ್ತರ ಬರೆಯಬೇಕಿದ್ದು, ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕ ಇರುತ್ತದೆ. ಬೆಂಗಳೂರು ಸೇರಿ ದೇಶಾದ್ಯಂತ ಇತರ 22 ನಗರಗಳಲ್ಲಿ ಪರೀಕ್ಷಾ ಕೇಂದ್ರ ಇರಲಿದೆ. ಲಿಖಿತ ಪರೀೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

ತರಬೇತಿ ಅವಧಿ: ಆಯ್ಕೆಯಾದ ನಂತರ ಮೊದಲ ವರ್ಷ 3 ತಿಂಗಳು ತರಬೇತಿ ನೀಡಲಾಗುವುದು. ಮೊದಲ ವರ್ಷ ಸೇರಿ ಪ್ರತಿವರ್ಷ 2 ತಿಂಗಳ ವಾಷಿರ್ಕ ತರಬೇತಿ ಇರುತ್ತದೆ. ನಂತರ ಮೊದಲ 2 ವರ್ಷ ಚೆನ್ನೈದ ಒಟಿಎನಲ್ಲಿ 3 ತಿಂಗಳ ಪೋಸ್ಟ್​ ಕಮಿಷನಿಂಗ್​ ತರಬೇತಿ ನೀಡಲಾಗುವುದು.

ವೇತನ: ಅಭ್ಯರ್ಥಿಗಳಿಗೆ 56,100 ರೂ.ಗಳಿಂದ 1.77 ಲಕ್ಷ ರೂ. ವರೆಗಿನ ವೇತನ ಶ್ರೇಣಿ ನಿಗದಿಪಡಿಸಲಾಗುತ್ತದೆ. ಲೆಫ್ಟಿನೆಂಟ್​ ಹುದ್ದೆವರೆಗೂ ಪದೋನ್ನತಿ ನೀಡುವ ಅವಕಾಶ ಇರುತ್ತದೆ.

ಅರ್ಜಿ ಶುಲ್ಕ: ಅಭ್ಯರ್ಥಿಗಳು 200 ರೂ. ಅನ್ನು ಅರ್ಜಿ ಶುಲ್ಕ ರೂಪದಲ್ಲಿ ಪಾವತಿಸತಕ್ಕದ್ದು.

ಅರ್ಜಿ ಸಲ್ಲಿಸಲು ಕೊನೇ ದಿನ: 19.8.2021

ಲಿಖಿತ ಪರೀಕ್ಷೆ ನಡೆಯುವ ದಿನಾಂಕ: 26.9.2021

ಅಧಿಸೂಚನೆಗೆ: https://bit.ly/3zi948w

ಮಾಹಿತಿಗೆ: http://www.jointerritorialarmy.gov.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net