ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿರುವಿರಾ? ಸೂಕ್ಷ್ಮಾಣು ಸಂಶೋಧನಾ ಸಂಸ್ಥೆಯಲ್ಲಿರುವ ಉದ್ಯೋಗಾವಕಾಶ

job
Published on

ಇಂಡಿಯನ್ ಕೌನ್ಸಿಲ್ ಆಫ್​ ಮೆಡಿಕಲ್ ರಿಸರ್ಚ್ ಅಧೀನದಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್​ ವೈರಾಲಜಿ (ಎನ್‍ಐವಿ) ಮುಂಬೈನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. 11 ಹುದ್ದೆಗಳಲ್ಲಿ ಬ್ಯಾಕ್‍ಲಾಗ್ ಹುದ್ದೆಗಳೂ ಇವೆ. ಆಯ್ಕೆಯಾಗುವ ಅಭ್ಯರ್ಥಿಗಳನ್ನು ಮುಂಬೈನ ಶಾಖೆಗೆ ನೇಮಕ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಒಟ್ಟು ಹುದ್ದೆಗಳು: 11

ಹುದ್ದೆ ವಿವರ

* ಟೆಕ್ನಿಕಲ್ ಅಸಿಸ್ಟೆಂಟ್ - 3

* ರಿಸರ್ಚ್ ಅಸಿಸ್ಟೆಂಟ್ - 1

* ಲ್ಯಾಬೊರೇಟರಿ ಟೆಕ್ನಿಷಿಯನ್ - 4

* ಕ್ಲರಿಕಲ್ ಅಸಿಸ್ಟೆಂಟ್ - 1

* ಮಲ್ಟಿ ಟಾಸ್ಕಿಂಗ್ ಸ್ಟಾಫ್​ - 1

* ಟೆಕ್ನಿಕಲ್ ಆಫೀಸರ್ - 1

ಶೈಕ್ಷಣಿಕ ಅರ್ಹತೆ: ಪ್ರೌಢ ಶಿಕ್ಷಣ, ದ್ವಿತೀಯ ಪಿಯುಸಿ, ಮೆಡಿಕಲ್ ಲ್ಯಾಬೋರೇಟರಿ ಟೆಕ್ನಿಷಿಯನ್/ ಪಿಎಂಡಬ್ಲುೃ/ ರೇಡಿಯಾಲಜಿ/ ರೇಡಿಯೋಗ್ರಫಿಯಲ್ಲಿ 2 ವರ್ಷದ ಡಿಪ್ಲೋಮಾ, ಬಯೋಲಾಜಿಕಲ್ ಸೈನ್ಸ್/ ಬಯೋಟೆಕ್ನಾಲಜಿ/ ಮೈಕ್ರೋಬಯೋಲಜಿ/ ಜೆನೆಟಿಕ್ ಇಂಜಿನಿಯರಿಂಗ್‍ನಲ್ಲಿ ಪದವಿ, ವಿಜ್ಞಾನ ವಿಷಯದಲ್ಲಿ ಪದವಿ.

ವಯೋಮಿತಿ: ಕ್ಲರಿಕಲ್ ಅಸಿಸ್ಟೆಂಟ್‍ಗೆ ಗರಿಷ್ಠ 28 ವರ್ಷ, ಮಲ್ಟಿ ಟಾಸ್ಕಿಂಗ್ ಸ್ಟಾಫ್​ಗೆ ಗರಿಷ್ಠ 25 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 30 ವರ್ಷ.

ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 6 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 3, ಎಸ್ಸಿಗೆ 1, ಎಸ್ಟಿಗೆ 1 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

ವೇತನ: ಅಸಿಸ್ಟೆಂಟ್ ಹುದ್ದೆಗೆ ಮಾಸಿಕ 31,000 ರೂ., ಲ್ಯಾಬೊರೇಟರಿ ಟೆಕ್ನಿಷಿಯನ್ಸ್‍ಗೆ ಮಾಸಿಕ 18,000 ರೂ., ಕ್ಲ್ಲರಿಕಲ್ ಅಸಿಸ್ಟೆಂಟ್‍ಗೆ 17,000 ರೂ., ಮಲ್ಟಿ ಟಾಸ್ಕಿಂಗ್ ಸ್ಟಾïಗೆ 13,450 ರೂ., ಟೆಕ್ನಿಕಲ್ ಆಫೀಸರ್​ಗೆ ಮಾಸಿಕ 32,000 ರೂ. ವೇತನ ನಿಗದಿಯಾಗಿದ್ದು, ಯೋಜನೆಗೆ ಹಣ ಸಹಾಯ ಮಾಡುವ ಸಂಸ್ಥೆಯ ನಿಯಮಾನುಸಾರ ವೇತನ ಬದಲಾದರೂ ಆಗಬಹುದು ಎಂದು ತಿಳಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಆನ್‍ಲೈನ್ ವಿಡಿಯೋ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನದ ದಿನಾಂಕ, ಸಮಯವನ್ನು ಅಭ್ಯರ್ಥಿಗಳಿಗೆ ಮೇಲ್ ಮೂಲಕ ತಿಳಿಸಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 16.4.2021

ಅಧಿಸೂಚನೆಗೆ: https://bit.ly/3sL68OU

ಮಾಹಿತಿಗೆ: https://niv.co.in/

ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net